ಬೆಂಗಳೂರು: ಮದ್ಯಪಾನ ಮಾಡಿದ್ದಾನೆಂದು ಕಾಲೇಜಿನೊಳಗೆ ಬಿಡದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳ ಮೇಲ್ವಿಚಾರಕನನ್ನೇ ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಡಿಸಿಪ್ಲೀನ್ ಉಸ್ತುವಾರಿ ಜೈ ಕಿಶೋರ್ ರಾಯ್ ಎಂಬವರನ್ನು ಕಾಲೇಜು ವಿದ್ಯಾರ್ಥಿ ಭಾರ್ಗಬ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!
Advertisement
Advertisement
ಮದ್ಯಪಾನ ಮಾಡಿ ಕಾಲೇಜಿಗೆ ಬಂದಿದ್ದ ಭಾರ್ಗಬ್‌ನನ್ನ ಜೈ ಕಿಶೋರ್ ಗೇಟ್ ಬಳಿ ತಡೆದಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದವಾಯಿತು. ನಂತರ ಮನೆಗೆ ಹೋಗಿ ಚಾಕು ತಂದ ವಿದ್ಯಾರ್ಥಿಯು ಸೆಕ್ಯೂರಿಟಿ ಗಾರ್ಡ್ ಉಸ್ತುವಾರಿಗೆ ಚಾಕುವಿನಿಂದ ಇರಿದಿದ್ದಾನೆ.
Advertisement
Advertisement
ಅಸ್ಸಾಂ ಮೂಲದ ಭಾರ್ಗಬ್ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಪಿಜಿಯಲ್ಲಿ ವಾಸವಿದ್ದ. ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಕೊಲೆ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಕಿಶೋರ್ ಉತ್ತರ ಭಾರತ ಮೂಲದವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದೇ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಕಾಲೇಜಿನ ಭದ್ರತಾ ಲೋಪವೇ ಈ ಸಾವಿಗೆ ಕಾರಣ ಎಂದು ಮೃತ ಕಿಶೋರ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!