ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ (Chinnaswamy Stampede) ದುರಂತದ ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬಿಸಿಸಿಐ (BCCI) ಬೇರೆಡೆ ಸ್ಥಳಾಂತರ ಮಾಡಿದೆ. ದುರಂತದ ಬಳಿಕ ಬಿಸಿಸಿಐ ಪಂದ್ಯಗಳ ಸ್ಥಳಾಂತರಕ್ಕೆ ಮುಂದಾಗಿದೆ.
ನವೆಂಬರ್ 13 ರಿಂದ 19ರವರೆಗೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ನಡುವಣ ಪಂದ್ಯಗಳ ಆಯೋಜನೆ ಮಾಡಲಾಗಿತ್ತು. ಆದರೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ದುರಂತ ಬಳಿಕ ಬಿಸಿಸಿಐ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ: Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್
ನವೆಂಬರ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳು ಸ್ಥಳಾಂತರ ಆಗಿದ್ದು, ಈ ಬಗ್ಗೆ ನಿರ್ದಿಷ್ಟ ಕಾರಣ ನೀಡದ ಬಿಸಿಸಿಐ, ಪಂದ್ಯ ಸ್ಥಳಾಂತರ ಬಗ್ಗೆಯಷ್ಟೇ ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ