ಕಾರವಾರ: ಮಳೆಯಿಂದಾಗಿ ಉತ್ತರಕನ್ನಡದ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್‍ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದ ಬಂದ ಕಾರಣಕ್ಕೆ ಡ್ಯಾಮ್ ಒಡೆದು ಹೋಗಿದ್ದು, 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆಯಿದೆ.
ಭತ್ತ, ಜೋಳ ಬೆಳದಿರುವ ಮುಂಡಗೋಡಿನ 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆ ಇದೆ. 2009ರಲ್ಲಿ ಈ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿತ್ತು. ಆ ನಂತರ ಅದನ್ನು ಸರಿಪಡಿಸಲಾಗುತ್ತು. ಆದರೆ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾದ ಹಿನ್ನೆಲೆ ನೀರಿನ ಒತ್ತಡಕ್ಕೆ ಎರಡನೇ ಬಾರಿ ಚಿಗಳ್ಳಿ ಡ್ಯಾಮ್ ಒಡೆದಿದೆ.
Advertisement
Advertisement
ಚೆಕ್ ಡ್ಯಾಮ್ ಆಸುಪಾಸಿನ ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಈಗಾಗಲೇ ಚೆಕ್ ಡ್ಯಾಮ್‍ನ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
Advertisement
ಈ ಬಗ್ಗೆ ಡಿಸಿ ಡಾ. ಹರೀಶ್ ಕುಮಾರ್.ಕೆ ಅವರು ಪ್ರತಿಕ್ರಿಯಿಸಿ, ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿರುವ ಬಗ್ಗೆ ಪ್ರಾಥಮಿಕ ವರದಿಯನ್ನು ತಹಶಿಲ್ದಾರ್ ಹಾಗೂ ಎಸಿ ಅವರಿಂದ ಪಡೆದಿದ್ದೇನೆ. ಈಗಾಗಲೇ ಅಲ್ಲಿನ ಸುತ್ತಮುತ್ತಲ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚಿಸಿದ್ದೇವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ ಅಪಾರ ಪ್ರಮಾಣದಲ್ಲಿ ಕೃಷಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಡ್ಯಾಮ್‍ನಿಂದ ಹರಿದ ನೀರು ಬೇಡ್ತಿ ನದಿಯನ್ನು ಸೇರುತ್ತದೆ. ಹೀಗಾಗಿ ಜನರು ಆತಂಕ ಪಡಬೇಡಿ, ಸುಳ್ಳು ವದಂತಿಗಳಿಗೆ ಕವಿಕೊಡಬೇಡಿ, ಏನಾದರೂ ತೊಂದರೆಯಾದರೆ ನೋಡಿಕೊಳ್ಳಲು ರಕ್ಷಣಾ ತಂಡ ಈ ಪ್ರದೇಶ ಸುತ್ತಮುತ್ತಲೇ ಇದೆ ಎಂದು ಧೈರ್ಯ ಹೇಳಿದ್ದಾರೆ.