– ವಕ್ಫ್ ಬ್ಯಾನ್ ಮಾಡಿ ಅಂದೇ ಇಲ್ಲ
– ಸ್ವಾಮೀಜಿ ಬೆನ್ನಿಗೆ ನಿಂತ ಬಿಜೆಪಿ
ಬೆಂಗಳೂರು: ಭಾರತ ಸರ್ವಧರ್ಮಗಳ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekar Swamiji) ಯೂಟರ್ನ್ ಹೊಡೆದಿದ್ದಾರೆ.
Advertisement
ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ ಸ್ವಾಮೀಜಿಗೆ ಉಪ್ಪಾರಪೇಟೆ ಪೊಲೀಸರಿಂದ ನೊಟೀಸ್ ಹೊರಡಿಸಿದ್ದಾರೆ. ಡಿಸೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ. ಈ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಸ್ವಾಮೀಜಿ ಮಾತನಾಡಿದ್ದಾರೆ. ಇದನ್ನೂ ಓದಿ: Cyclone Fengal | ಚೆನ್ನೈ ಏರ್‌ಪೋರ್ಟ್‌ನಿಂದ 13 ವಿಮಾನಗಳ ಯಾನ ರದ್ದು
Advertisement
Advertisement
ಜೈಲಿಗೆ ಹಾಕ್ತರಾ? ಹಾಕ್ಲಿ ಬಿಡಿ, ಅಲ್ಲೇ ಇರ್ತಿನಿ. ದೇವರ ಮೇಲೆ ಬರ ಹಾಕಿದ್ದೀನಿ, ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ರೈತರು ಭೂಮಿ ಕಳೆದುಕೊಳ್ಳದಕ್ಕೆ ವಿರೋಧಿಸಿ ಮಾತಾನಾಡಿದ್ದೆ. ಮಾತಿನ ಭರಾಟೆಯಲ್ಲಿ ಮುಸ್ಲಿಮರ ಮತದಾನದ ಬಗ್ಗೆ ಹೇಳಿದ್ದೆ. ಅದು ಉದ್ದೇಶ ಪೂರ್ವಕವಾಗಿ ಹೇಳಿದ ಮಾತಲ್ಲ. ಆ ಬಗ್ಗೆ ಮರುದಿನವೇ ಪತ್ರಿಕಾ ಹೇಳಿಕೆ ನೀಡಿದ್ದೆ. ಇದನ್ನ ಇಲ್ಲಿಗೆ ಬಿಟ್ಟು ಬಿಡಿ, ಭಾರತ ಎಲ್ಲ ಧರ್ಮದವರ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನು ಸಹ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ. ಇದಾದ್ಮೇಲೆ ಯಾಕೇ ದೂರು ದಾಖಲಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.
Advertisement
ವಿಚಾರಣೆಗೆ ಹೋಗಲ್ಲ, ಅವ್ರೇ ಇಲ್ಲಿಗೆ ಬರಲಿ:
ನೋಟಿಸ್ ನೀಡಿರೋದು ಗೊತ್ತಿಲ್ಲ, ನನಗೆ ಆರೋಗ್ಯ ಸರಿಯಿಲ್ಲ, ನಾನು ವಿಶ್ರಾಂತಿಯಲ್ಲಿದ್ದೆ. ನಿನ್ನೆ ಕೆಲ ನಾಯಕರು ಬಂದು ನಾವಿದ್ದೇವೆ ಅಂತಾ ಹೇಳಿದ್ರು. ನಾನು ಯಾವುದರ ಬಗ್ಗೆಯೂ ಚಿಂತೆ ಮಾಡ್ತಿಲ್ಲ. ವಕ್ಫ್ ಬ್ಯಾನ್ ಮಾಡಿ ಅಂತ ನಾನು ಹೇಳೇ ಇಲ್ಲ. ರೈತರ ಭೂಮಿ ರೈತರಿಗೆ ನೀಡಿ ಅಂತಾ ಹೇಳಿದ್ದೇನೆ. ಸರ್ಕಾರ ಯಾಕೇ ಹೀಗೆ ಮಾಡ್ತಿದೆ? ಒಂದು ಸಮುದಾಯದವರನ್ನ ಓಲೈಕೆ ಮಾಡೋದು ಸರಿಯಲ್ಲ. ವಿಚಾರಣೆಗೆ ಹೋಗಲು ಆಗೋಲ್ಲ, ಅವ್ರೇ ಇಲ್ಲೇ ಬಂದ್ರೇ ನನ್ನ ಹೇಳಿಕೆಗೆ ಸ್ಪಷ್ಟನೆ ನೀಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಾರಣಾಸಿ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಬಳಿ ಆಕಸ್ಮಿಕ ಬೆಂಕಿ – 200 ದ್ವಿಚಕ್ರ ವಾಹನಗಳು ಭಸ್ಮ
ನನಗಿಂತ ಮೊದಲು ಇತಂಹ ಅನೇಕ ಹೇಳಿಕೆಗಳು ಬಂದಿದೆ. ನಾನು ಹೇಳಿದ ಕೂಡ್ಲೇ ಮತದಾನದಿಂದ ಹಿಂದೆ ಸರಿಸೋಕೆ ಆಗುತ್ತಾ? ಅದಕ್ಕೆ ಅಂತಾ ಸಂವಿಧಾನವಿದೆ. ರೈತರಿಗೆ ಒಳ್ಳೆಯದು ಆಗಬೇಕು ಅನ್ನೋದಷ್ಟೇ ನನ್ನ ಉದ್ದೇಶ. ನನ್ನ ಆರೋಗ್ಯ ಸರಿಯಿಲ್ಲ. ಆರ್. ಅಶೋಕ್, ಅಶ್ವಥ್ ನಾರಾಯಣ್ ಬಂದಿದ್ರು, ನಿಮ್ಮ ಪರವಾಗಿ ಇದ್ದೇವೆ ಅಂತ ಹೇಳಿದ್ರು. ಕಾನೂನಿನಲ್ಲಿ ಏನ್ ಆಗಿತ್ತೋ ನೋಡೋಣ. ಯಾಕ್ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ. ಮುಂದೇನಾಗುತ್ತೋ, ಆ ದೇವರು ನಡೆಸಿದಂತೆ ಆಗುತ್ತೆ ಎಂದು ನುಡಿದಿದ್ದಾರೆ.