ನವದೆಹಲಿ: ರಸ್ತೆ ಅಪಘಾತಗಳಿಂದಾಗಿ (Road Accident) ಪ್ರತಿವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಪಘಾತಕ್ಕೊಳಗಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ನೆರವು ನೀಡುವವರಿಗೆ ಕೇಂದ್ರ ಸರ್ಕಾರ ರಹಾ-ವೀರ್ ಯೋಜನೆ (Rah-Veer Scheme) ಅಡಿಯಲ್ಲಿ 25 ಸಾವಿರ ರೂಪಾಯಿ ನೀಡಲಿದೆ. ಅಲ್ಲದೇ ಅಂಥವರಿಗೆ ಕಾನೂನಿನ ರಕ್ಷಣೆಯನ್ನೂ ನೀಡಲಾಗುತ್ತದೆ.
ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯನ್ನು ಗೋಲ್ಡನ್ ಅವರ್ (Golden Hour) ಎನ್ನಲಾಗುತ್ತದೆ. ಈ ಸಮಯದಲ್ಲಿ ಗಾಯಾಳುವಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆತರೆ ಸಾವು ಅಥವಾ ಆಗಬಹುದಾದ ಅಪಾಯವನ್ನು ಕಡಿಮೆ ಮಾಡಬಹುದು. ಹೀಗಾಗಿ ರಹಾ-ವೀರ್ ಆಗಲು ಯಾವುದೇ ವೈದ್ಯಕೀಯ ತರಬೇತಿ ಅಗತ್ಯವಿರಲ್ಲ. ಬದಲಾಗಿ ಗಾಯಗೊಂಡವರನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಿದರೆ ಸಾಕು, ಕಾನೂನಿನ ರಕ್ಷಣೆಯನ್ನೂ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ – ಹಿಂಪಡೆಯುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮಾಹಿತಿಯಂತೆ ರಸ್ತೆ ಅಪಘಾತಗಳಿಂದ ದೇಶದ ಜಿಡಿಪಿಯ ಶೇ.3ರಷ್ಟು ನಷ್ಟವಾಗುತ್ತಿದೆ. ಅಪಘಾತ ನಡೆದಾಗ ಪೊಲೀಸ್ ಕಿರಿಕಿರಿ, ಕೋರ್ಟ್-ಕಚೇರಿ ಅಲೆದಾಟ, ಆಸ್ಪತ್ರೆ ಖರ್ಚು, ಕಾನೂನಿಗೆ ಹೆದರಿ ಜನ ಸಹಾಯ ಮಾಡಲು ಬರಲ್ಲ. ಈ ಭಯ ಹೋಗಲಾಡಿಸುವುದು ರಹಾ-ವೀರ್ ಯೋಜನೆ ಉದ್ದೇಶ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣ – ಠಾಣೆಗೆ ಹಾಜರಾದ ಐವರು ವಶಕ್ಕೆ
