ನವದೆಹಲಿ: ಲಾಕ್‍ಡೌನ್ ಬಿಗ್ ರಿಲೀಫ್ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿ ಆರ್ಥಿಕತೆಗೆ ಆದಾಯ ತುಂಬಿಸುವ ಕೆಲಸ ಮಾಡಿದೆ.
ಒಂದು ಲೀಟರ್ ಪೆಟ್ರೋಲ್ ಮೇಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರೂ. ವಿಶೇಷ ಅಬಕಾರಿ ಸುಂಕ ಹೇರಿದೆ.
Advertisement
ಪತಿ ಲೀಟರ್ ಡೀಸೆಲ್ ಮೆಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೇರಿದರೆ, 5 ರೂ. ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಬಕಾರಿ ಸುಂಕ ಏರಿಕೆಯಾದರೂ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Advertisement
Advertisement
ದೆಹಲಿ ಸರ್ಕಾರದಿಂದ ಏರಿಕೆ:
ದೆಹಲಿ ಸರ್ಕಾರ ಪೆಟ್ರೋಲ್ ಮೇಲೆ ಶೇ.27 ಮತ್ತು ಡೀಸೆಲ್ ಮೇಲೆ ಶೇ.16.75 ವ್ಯಾಟ್ ನಿಗದಿ ಮಾಡಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ.30, ಡೀಸೆಲ್ ಮೇಲೆ ಶೇ.30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ.
Advertisement
ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂ., ಡೀಸೆಲ್ ಬೆಲೆ 7.10 ರೂ. ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.26 ರೂ.(ಹಿಂದಿನ ದರ 69.59) ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 69.59 ರೂ.(62.29 ರೂ.) ಏರಿಕೆಯಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾಗಿದ್ದರೂ ರಾಜ್ಯಗಳಿಗೆ ಹೆಚ್ಚಿನ ಆದಾಯ ತಂದುಕೊಡುವ ಪೆಟ್ರೋಲ್, ಡೀಸೆಲ್, ಮದ್ಯವನ್ನು ಪಟ್ಟಿಯಲ್ಲಿ ಕೈ ಬಿಡಲಾಗಿತ್ತು. ಪರಿಣಾಮ ಈ ವಸ್ತುಗಳ ಮೇಲೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಅಧಿಕಾರವಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ತೈಲ ಬೆಲೆ ಇಳಿಕೆಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಲಾಕ್‍ಡೌನ್ ನಿಂದ ಆಗಿರುವ ನಷ್ಟವನ್ನು ಸರಿಪಡಿಸಲು ಪೆಟ್ರೋಲ್, ಡೀಸೆಲ್, ಮದ್ಯದ ಮೇಲೆ ತೆರಿಗೆ ವಿಧಿಸುತ್ತಿವೆ.
ಹರ್ಯಾಣ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅನುಕ್ರಮವಾಗಿ 1 ರೂ., 1.1 ರೂ. ಏರಿಕೆ ಮಾಡಿತ್ತು. ತಮಿಳುನಾಡು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.25 ರೂ., ಡೀಸೆಲ್ ಮೇಲೆ 2.50 ರೂ. ಏರಿಕೆ ಮಾಡಿದೆ.