ಬೆಂಗಳೂರು: ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ (ECI) ಉತ್ತರ ಕೊಟ್ಟು ಎಸ್‌ಐಆರ್ (Special Intensive Revision) ಮಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾಳೆಯಿಂದ ಎಸ್‌ಐಆರ್ ನಡೆಯಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಈ ಬಗ್ಗೆ ನಾವು ಕ್ಯಾಬಿನೆಟ್‌ನಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಮುಖ್ಯ ಚುನಾವಣಾಧಿಕಾರಿಗೂ ಆಕ್ಷೇಪ ಸಲ್ಲಿಸಲಾಗಿದೆ. ಯಾವ ಆಧಾರದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡ್ತಾರೆ? ಇದರ ಹಿಂದಿನ ತರ್ಕ ಏನು ಅಂತ ಆಯೋಗಕ್ಕೆ ಕೇಳಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಬಗ್ಗೆ ಬೀದಿಯಲ್ಲಿ ಚರ್ಚೆ ಸಾಧ್ಯವೇ?: ಬೈರತಿ ಸುರೇಶ್
ಗೊಂದಲ ಇದ್ದರೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕು. ದಾಖಲೆಗಳಲ್ಲಿ ಸ್ಪೆಲ್ಲಿಂಗ್ ತಪ್ಪಾದ ಮಾತ್ರಕ್ಕೆ ಅವರ ಹಕ್ಕು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಕ್ಷೇಪಕ್ಕೆ ಆಯೋಗದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ನಾವು ಎಸ್‌ಐಆರ್ ಮಾಡಬೇಡಿ ಎಂದು ಹೇಳಿಲ್ಲ. ಉತ್ತಮವಾದ ವೋಟರ್ ಲಿಸ್ಟ್ ಕೊಡಲಿ. ಪಾರದರ್ಶಕವಾಗಿ ಮಾಡಲಿ ಎಂದರು.
ಎಸ್‌ಐಆರ್ – ನ್ಯಾಯಮಂಡಳಿ ಮೊರೆ ಹೋದ್ರೆ ಜಡ್ಜ್ ರಾಜೀನಾಮೆ
ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಡವರ ಹಕ್ಕು ಕಿತ್ತುಕೊಳ್ಳಲಾಗಿದೆ. ನಾವು ಜಾಗೃತಿ ಅಭಿಯಾನ ಮಾಡ್ತಿದ್ದೇವೆ. ಕಾನೂನಾತ್ಮಕವಾಗಿ ಇದನ್ನು ಪರಿಗಣಿಸಬೇಕಾಗುತ್ತೆ. ಪಶ್ಚಿಮ ಬಂಗಾಳದಲ್ಲಿ 89 ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡ್ತಾರೆ. ನ್ಯಾಯಮಂಡಳಿಯಲ್ಲಿ ಕೇಳಲು ಅವಕಾಶ ಕೊಡಲ್ಲ. ಅವಕಾಶ ಕೇಳಿದ್ರೆ ಇದು ಮಾಡಲು ಆಗಲ್ಲ, ನಾಲ್ಕು ವರ್ಷಬೇಕು ಎಂದು ನ್ಯಾಯಮಂಡಳಿಯ ಜಡ್ಜ್ ರಾಜೀನಾಮೆ ಕೊಡ್ತಾರೆ ಎಂದರು.
ಕೆಂಪೇಗೌಡ ಜಯಂತಿ ಗಲಾಟೆ – ಸಾಕ್ಷಿ ಸಿಕ್ಕರೆ ಅರೆಸ್ಟ್
ಕೆಂಪೇಗೌಡ ಜಯಂತಿಯಲ್ಲಿ ಗಲಾಟೆಗೆ ಪ್ರಚೋದನೆ ಕೊಟ್ಟವರ ಮೇಲೂ ಕ್ರಮ ಆಗಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ, ಯಾರೇ ಇದ್ದರೂ ದೂರು ಕೊಟ್ಟರೆ ನಾವು ತೆಗೆದುಕೊಳ್ಳುತ್ತೇವೆ. ಎಲ್ಲೆಲ್ಲೋ ಹೋಗಿ ಮಾತನಾಡಿದರೆ ಕ್ರಮ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಎಫ್‌ಐಆರ್ ದಾಖಲಾದರೆ. ಕ್ರಮಕೈಗೊಳ್ಳುತ್ತೇವೆ. ದೂರು ಕೊಡಿ, ಸಾಕ್ಷಿ ಸಿಕ್ಕಿದ್ರೆ ಅರೆಸ್ಟ್ ಮಾಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ನನ್ನ ರಾಜಕೀಯ ಮುಗಿಯಿತು.. ನೀವು ಮೈ ಮರೆತರೆ ನಿಮ್ಮ ರಾಜಕೀಯದ ಮಾರಣಹೋಮ ನಿಶ್ಚಿತ: ಸಿದ್ದರಾಮಯ್ಯ
