ಬೆಂಗಳೂರು: ಭೂಮಿ ಕೊಡಿ ಅಂತ ರೈತರಿಗೆ ಬಲವಂತ ಮಾಡುವಂತಿಲ್ಲ. ನಾವು ಯಾವತ್ತೂ ಆ ರೀತಿ ಬಲವಂತವಾಗಿ ಭೂಮಿಯನ್ನು ಪಡೆದಿಲ್ಲ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ (Bidadi Township) ಜಟಾಪಟಿ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ, ಭೂಸ್ವಾಧೀನ ನಿಯಮಗಳು ಬಹಳ ಸ್ಪಷ್ಟವಾಗಿವೆ. ಯಾರು ಕೂಡ ಒತ್ತಾಯಪೂರ್ವಕವಾಗಿ ಭೂಮಿ ತೆಗೆದುಕೊಳ್ಳಲು ಆಗಲ್ಲ. ರೈತರು ಸ್ವ ಇಚ್ಛೆಯಿಂದ ಎಲ್ಲಿ ಕೊಡುತ್ತಾರೆ ಅದನ್ನು ಪರಿಗಣನೆ ಮಾಡ್ತೀವಿ. ಯಾರು ಸ್ವ ಇಚ್ಛೆಯಿಂದ ಭೂಮಿ ಕೊಡುವುದಿಲ್ಲವೋ ಅಲ್ಲಿ ಯೋಜನೆ ಆಗಲ್ಲ. 90 ರಿಂದ 95% ವಿರೋಧ ಆಗಿದ್ರೆ ಈ ನಿಯಮ ಅನ್ವಯ ಆಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬೈರಮಂಗಲದಲ್ಲಿ ಜಗಳ ಆಗಿ ಗೋಲಿಬಾರ್ ಆಗಬೇಕು, ಇದರಿಂದ ರಾಜಕೀಯ ಬೇಳೆ ಬೇಯಿಸಲು ಜೆಡಿಎಸ್ ಹುನ್ನಾರ: ಹೆಚ್.ಸಿ ಬಾಲಕೃಷ್ಣ
ದೇವನಹಳ್ಳಿ, ಚನ್ನರಾಯಪಟ್ಟಣದ ಬಳಿ ನಾವು ಭೂಸ್ವಾಧೀನ ಕೈಬಿಟ್ಟಿಲ್ವಾ? ಕೃಷಿ ವಲಯ ಅಂತಾನೇ ಘೋಷಣೆ ಮಾಡಿದ್ದೇವೆ. ಕೆಲವರು ಇಂಡಸ್ಟ್ರಿ ಮಾಡಬೇಕು ಅಂತ ಈಗ ಬಂದಿದ್ದರು. ಅದನ್ನು ಪರಿಶೀಲನೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ.
ಅಪರಾಧ ಪ್ರಕರಣಗಳ ಹೆಚ್ಚಳ – ಗೃಹ ಸಚಿವರು ಹೇಳಿದ್ದೇನು?
ಅಪರಾಧ ಪ್ರಕರಣಗಳ ಹೆಚ್ಚಳ ವಿಚಾರವಾಗಿ, ಕುಟುಂಬದಲ್ಲಿ ಅಪರಾಧ ನಡೆದರೆ ಗೊತ್ತಾಗಲ್ಲ. ಎಲ್ಲರೂ ಪರಿಚಿತರೇ ಆಗಿರುತ್ತಾರೆ. ಕೌಟುಂಬಿಕ, ವೈಯಕ್ತಿಕ ಕಾರಣಗಳಿಗೆ ಕೊಲೆಗಳು ಕುಟುಂಬಗಳಲ್ಲಿ ನಡೆಯುತ್ತಿವೆ. ನಾವೂ ಕೂಡಾ ಇಲಾಖೆಯಿಂದ ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ಕೊಟ್ಟು ಎಸ್‌ಐಆರ್ ಮಾಡಲಿ: ಪ್ರಿಯಾಂಕ್ ಖರ್ಗೆ ಆಗ್ರಹ
