ರಾಮನಗರ: ಟೌನ್‌ಶಿಪ್ (Bidadi Township) ಪ್ರದೇಶದಲ್ಲಿ ಎರಡೂ ಪಕ್ಷದವರು ಸಭೆ ಸೇರಿ ಹೊಡೆದಾಡಬೇಕು. ಆಗ ಯಾರಿಗಾದರೂ ಹೆಚ್ಚುಕಮ್ಮಿಯಾಗಿ ಗೋಲಿಬಾರ್ ಆಗಬೇಕು. ಆಗ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಜೆಡಿಎಸ್‌ನವರು (JDS) ಹುನ್ನಾರ ಮಾಡುತ್ತಿದ್ದಾರೆ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಗಂಭೀರ ಆರೋಪ ಮಾಡಿದ್ದಾರೆ.
ಟೌನ್‌ಶಿಪ್ ಪರ-ವಿರೋಧ ಹೋರಾಟ ಕುರಿತು ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿ ಮತ್ತು ಕುಣಿಗಲ್‌ನಲ್ಲಿ ಗೋಲಿಬಾರ್ ಆದಾಗ ಜೆಡಿಎಸ್ ನವರಿಗೆ ಪಾದಯಾತ್ರೆ ಮಾಡಿ ಅನುಭವವಿದೆ. ಇದೇ ನೆಪದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರಿಗೆ ಮಸಿ ಬಳಿಯಬೇಕು ಎಂದು ಕಾಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೈಡ್ರಾಮಾ – ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ಸ್ಫೋಟ
ಸಾರ್ವಜನಿಕರಿಗೆ ಗೊತ್ತಾಗುವಂತೆ ವಿಧಾನಸೌಧದಲ್ಲಿ ಮಾಧ್ಯಮದ ಎದುರು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಚರ್ಚೆ ನಡೆಸಿ, ಯೋಜನೆಯ ವಾಸ್ತವಾಂಶ ಜನರಿಗೆ ಗೊತ್ತಾಗಲಿ ಎಂಬುದು ನಮ್ಮ ಉದ್ದೇಶ. ಈಗಾಗಲೇ ಬೈರಮಂಗಲದಲ್ಲಿ ಯೋಜನೆ ಪರ ಮತ್ತು ವಿರೋಧ ಹೋರಾಟ ಶುರುವಾಗಿ, ಜಗಳ ನಡೆದಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾರವಾರ| ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಗೆ ಬೆಂಕಿ ತಗುಲಿ ಸುಟ್ಟುಕರಕಲು
