ಈ ದಿನ ಹೊಸ ವರ್ಷದ ಸಂಭ್ರಮ ಮಾತ್ರವಲ್ಲದೇ ಭಾನುವಾರ. ರಜಾ ದಿನದಂದು ಮನೆಯಲ್ಲಿ ಸ್ಪೆಷಲ್ ಆಗಿ ನಾನ್‌ವೆಜ್ ರೆಸಿಪಿ ಮಾಡಬೇಕು ಅಲ್ವಾ? ನಾವಿಂದು ಹೊಸ ವರ್ಷಕ್ಕೆ ಚಿಕನ್ ಟಿಕ್ಕಾ ಮಸಾಲಾ (Chicken Tikka Masala) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸುಲಭ ವಿಧಾನದಲ್ಲಿ ಇದನ್ನು ಮಾಡುವುದು ಹೇಗೆ ಎಂದು ಕಲಿಯಿರಿ ಹಾಗೂ ಹೊಸ ವರ್ಷವನ್ನು ಸಂಭ್ರಮಿಸಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಬ್ರೆಸ್ಟ್ – ಅರ್ಧ ಕೆಜಿ (ಮೂಳೆ, ಚರ್ಮ ರಹಿತ)
ಮೊಸರು – ಅರ್ಧ ಕಪ್
ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 3
ಜೀರಿಗೆ – 1 ಟೀಸ್ಪೂನ್
ಕೆಂಪುಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಟಿಕ್ಕಾ ಮಸಾಲಾ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಶುಂಠಿ ಪೇಸ್ಟ್ – 2 ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಕೆಂಪುಮೆಣಸಿನ ಪುಡಿ – 2 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ರುಬ್ಬಿದ ಟೊಮೆಟೊ – 1 ಇದನ್ನೂ ಓದಿ: ಚಿಕನ್‌ನಂತೆಯೇ ರುಚಿ – ಸೋಯಾಬೀನ್ ನಗ್ಗೆಟ್ಸ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಬ್ರೆಸ್ಟ್‌ಗಳನ್ನು ತೆಗೆದುಕೊಂಡು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
* ಒಂದು ಪಾತ್ರೆಗೆ ಚಿಕನ್ ಹಾಕಿ, ಮೊಸರು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಚಿಕನ್ ಮಿಶ್ರಣವನ್ನು ಫ್ರಿಡ್ಜ್‌ನಲ್ಲಿಟ್ಟು ಸುಮಾರು 4-5 ಗಂಟೆ ವಿಶ್ರಾಂತಿ ನೀಡಿ.
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಚಿಕನ್ ತುಂಡುಗಳನ್ನು ಸೇರಿಸಿ 6-7 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಪಕ್ಕಕ್ಕಿಡಿ.
* ಈಗ ಅದೇ ಪ್ಯಾನ್ ಅನ್ನು ತೆಗೆದುಕೊಂಡು, ಸ್ವಚ್ಛಗೊಳಿಸಿ ಬಳಿಕ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಹುರಿದುಕೊಳ್ಳಿ.
* ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಕೆಂಪು ಮೆಣಸು, ಗರಂ ಮಸಾಲಾ, ಅರಿಶಿನ ಸೇರಿಸಿ ಮಿಶ್ರಣ ಮಾಡಿ.
* ಈಗ ಟೊಮೆಟೊ ಪ್ಯೂರಿ ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡುತ್ತಾ 4 ನಿಮಿಷ ಬೇಯಿಸಿ.
* ಬಳಿಕ ಮೊಸರು ಸೇರಿಸಿ ಮಿಶ್ರಣ ಮಾಡಿ.
* ಉರಿಯನ್ನು ಕಡಿಮೆ ಮಾಡಿ, ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಚಿಕನ್ ಟಿಕ್ಕಾ ಮಸಾಲಾ ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಕ್ರಿಸ್ಮಸ್ ಸ್ಪೆಷಲ್ – ತಂದೂರಿ ಚಿಕನ್ ಮಾಡುವುದು ಹೇಗೆ?