– ಕಾವೇರಿ ನೀರು ವಿಚಾರಣೆ ಸೆ.15 ಕ್ಕೆ ಮುಂದೂಡಿಕೆ
ನವದೆಹಲಿ: ಕಾವೇರಿ ನೀರು (Cauvery Water) ಹರಿಸುವ ವಿಚಾರವಾಗಿ ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ (Supreme Court) ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಸುಪ್ರೀಂ ಕೋರ್ಟ್ ನ್ಯಾ. ವಿಕ್ರಮನಾಥ್ ನೇತೃತ್ವದ ಪೀಠದಲ್ಲಿ ಇಂದು ಕಾವೇರಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಾದ ಮಂಡಿಸಿದ ಕರ್ನಾಟಕ, ಸಿಡಬ್ಲ್ಯೂಎಂಎ ಆದೇಶದ ಪ್ರಕಾರ ನೀರು ಹರಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚು ನೀರು ಹರಿಯುತ್ತಿದೆ. CWMA ನಿಗದಿಪಡಿಸಿದ್ದಕ್ಕಿಂತ ಅಧಿಕ ನೀರು ಹರಿದಿದೆ. ಕರ್ನಾಟಕ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹಲವು ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಿದೆ ಎಂದು ತಿಳಿಸಿತು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿಂದು ಕಾವೇರಿ ಕದನ – ಮಂಡ್ಯದಲ್ಲಿ ರೊಟ್ಟಿ ಚಳವಳಿ
ತಮಿಳುನಾಡು ವಾದಿಸಿ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಜಲಾಶಯಗಳು ತುಂಬುತ್ತಿದೆ. ನಮಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. 35 ಟಿಎಂಸಿ ನೀರು ನಮಗೆ ಬರಬೇಕಿತ್ತು. ಅಷ್ಟು ನೀರು ಹರಿಸಿಲ್ಲ. ಬಾಕಿ ಉಳಿಸಿಕೊಂಡ ನೀರು ಹರಿಸಬೇಕು ಎಂದು ಹೇಳಿತು.
ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ ನೀರು ಹರಿಸುತ್ತಿದೆಯಲ್ಲ ಎಂದು ಕೋರ್ಟ್ ತಿಳಿಸಿತು. ಬಳಿಕ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಲಾಯಿತು.
ಪರಿಷ್ಕೃತ ಮಾಹಿತಿ ಸಲ್ಲಿಕೆ ಮಾಡಿ. CWRC ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಿ ಪರಿಷ್ಕೃತ ಮಾಹಿತಿ ಆಧಾರದ ಮೇಲೆ ನೀರು ಹರಿಸಲು ಸೂಚಿಸಲಿ. ಬಾಕಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನೀವು CWRC ಸಂಪರ್ಕಿಸಿ ಎಂದು ಕೋರ್ಟ್ ಸೂಚಿಸಿತು. ಇದನ್ನೂ ಓದಿ: ಸಿಎಂ ಡಿಕೆಶಿ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’: ಆರ್.ಅಶೋಕ್ ಕಿಡಿ
