ಶಿವಮೊಗ್ಗ: ಕಾರಿಗೆ (Car) ಅಡ್ಡ ಬಂದ ಕಡವೆಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ (Accident) ಘಟನೆ ಹೊಸನಗರ (Hosanagara) ತಾಲೂಕಿನ ನಗರ ಸಮೀಪದ ನೂಲಿಗ್ಗೇರಿ ಬಳಿ ನಡೆದಿದೆ.
ಸಾಗರ ಮೂಲದ ಪ್ರಕಾಶ್ ಎಂಬವರು ಮಣಿಪಾಲ್‌ನಿಂದ ಸಾಗರಕ್ಕೆ ವಾಪಸ್ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ನೂಲಿಗ್ಗೇರಿ ಬಳಿ ಕಡವೆ ದಿಢೀರ್ ರಸ್ತೆಗೆ ನುಗ್ಗಿದೆ. ಕಡವೆಗೆ ಕಾರು ಡಿಕ್ಕಿಯಾಗೋದನ್ನು ತಪ್ಪಿಸಲು ಚಾಲಕ ಕಾರನ್ನು ಬದಿಗೆ ತರಲು ಯತ್ನಿಸಿದ್ದು, ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ತುಂಡಾಗಿ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಇದನ್ನೂ ಓದಿ: ಸಾಲು ಸಾಲು ರಜೆ ಎಫೆಕ್ಟ್ – ಮುಂಬೈ, ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ 3 ಕಿ.ಮೀ ಟ್ರಾಫಿಕ್ ಜಾಮ್
ಕಾರಿನಲ್ಲಿದ್ದ ಪ್ರಕಾಶ್ ಸೇರಿದಂತೆ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹುಬ್ಬಳ್ಳಿ | ಗಣೇಶನನ್ನು ತರುವ ಮೆರವಣಿಗೆಯಲ್ಲಿ ಮಹಿಳೆಯರ ಜೊತೆ ಅಸಭ್ಯ ವರ್ತನೆ – ಕಿಡಿಗೇಡಿಗಳಿಗೆ ಪೊಲೀಸರಿಂದ ಲಾಠಿ ರುಚಿ

