ಮುಂಬೈ: ಗಣೇಶ ಹಬ್ಬ (Ganesha Festival) ಸೇರಿದಂತೆ ಸಾಲು ಸಾಲು ರಜೆಗಳ ಹಿನ್ನೆಲೆ ಮುಂಬೈನಿಂದ (Mumbai) ಹಲವಾರು ಜನ ತಮ್ಮ ತಮ್ಮ ಊರುಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ 3 ಕಿ.ಮೀ. ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ್ ಟೋಲ್ ಪ್ಲಾಜಾ ಬಳಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಸಂಚಾರ ದಟ್ಟಣೆಯಿಂದ ಕೊಂಕಣದ ಕಡೆಗೆ ಪ್ರಯಾಣಿಸುವವರಿಗೆ ಭಾರೀ ತೊಂದರೆಯಾಗಿದೆ. ಪ್ರಯಾಣಿಕರು ಖಲಾಪುರ್ ಬಳಿಯ ಖೋಪೋಲಿ ಎಕ್ಸಿಟ್ (ನಿರ್ಗಮನ ದ್ವಾರ) ಮೂಲಕ ಎಕ್ಸ್‌ಪ್ರೆಸ್‌ವೇಯಿಂದ ಹೊರಬಂದು, ‘ಯು-ಟರ್ನ್’ (U-turn) ತೆಗೆದುಕೊಂಡು ಖೋಪೋಲಿ-ಪೆನ್ ರಸ್ತೆ ಮತ್ತು ಪಾಲಿ ಫಾಟಾ ಮೂಲಕ ಪಾಲಿ ಕಡೆಗೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಹಬ್ಬಕ್ಕಾಗಿ ಊರಿಗೆ ಜನ; ಬೆಂಗಳೂರಲ್ಲಿ ಜಾಮ್ – ಕಿಲೋಮೀಟರ್‌ಗಟ್ಟಲೇ ನಿಂತ ವಾಹನಗಳು
ಪಾಲಿಯಿಂದ, ಪ್ರಯಾಣಿಕರು ವಾಕನ್ ಫಾಟಾ ಕಡೆಗೆ ಪ್ರಯಾಣಿಸಿ, ಅಲ್ಲಿಂದ ಮುಂಬೈ-ಗೋವಾ ಹೆದ್ದಾರಿಯನ್ನು ತಲುಪಿ ಕೊಂಕಣದ ಕಡೆಗೆ ತಮ್ಮ ಪ್ರಯಾಣವನ್ನು ಮುಂದುವರಿಸಬಹುದಾಗಿದೆ.
ಪಾಲಿ-ವಿಲೆ-ನಿಜಾಮ್‌ಪುರ-ರಾಯಗಢ ರಸ್ತೆ-ಮಹಾದ್ ಮಾರ್ಗದ ಮೂಲಕ ಪರ್ಯಾಯ ಮಾರ್ಗ ಬಳಸಬಹುದಾಗಿದೆ. ಖಲಾಪುರ್ ಬಳಿಯ ಸಂಚಾರ ದಟ್ಟಣೆಯನ್ನು ತಪ್ಪಿಸಲು, ಕೊಂಕಣದ ಕಡೆಗೆ ಪ್ರಯಾಣಿಸುವವರು ಈ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಲಾರಿ ಪಲ್ಟಿಯಾಗಿ ರಸ್ತೆ ತುಂಬಾ ಚೆಲ್ಲಾಡಿದ ಈರುಳ್ಳಿ, ಬೆಳ್ಳುಳ್ಳಿ – ಕಳುವಾಗದಂತೆ ಪೊಲೀಸರಿಂದ ಭದ್ರತೆ

