ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಸಾಧಾರಣ ಪ್ರದರ್ಶನ ಮುಂದುವರಿಸಿದ್ದಾರೆ. ಇಂದು ಒಂದೇ ದಿನ 5 ಚಿನ್ನದ ಪದಕಗಳನ್ನು ಬೇಟೆಯಾಡಿದ ಭಾರತ (India) ಪದಕ ಪಟ್ಟಿಯಲ್ಲಿ ಬಲಿಷ್ಠ ಉಜ್ಬೇಕಿಸ್ತಾನವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಪುರುಷರ ಹಾಕಿ (Hockey) ವಿಭಾಗದಲ್ಲಿ ಭಾರತದ ಪುರುಷರ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಈ ಮಹತ್ವದ ಗೆಲುವಿನೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿಯಲು ಸಾಧ್ಯವಾಯಿತು.
ಶುಕ್ರವಾರ 6 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಬಾಚಿಕೊಂಡು 8ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ್ದ ಭಾರತ, ಇಂದೂ ಕೂಡ ಅದೇ ಗೆಲುವಿನ ಓಟ ಮುಂದುವರಿಸಿದೆ. ಇಂದು ಭಾರತದ ಖಾತೆಗೆ 5 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 9 ಪದಕಗಳು ಸೇರ್ಪಡೆಯಾಗಿವೆ.
ಭಾರತ ಮತ್ತು ಉಜ್ಬೇಕಿಸ್ತಾನ ಎರಡೂ ದೇಶಗಳು ತಲಾ 21 ಚಿನ್ನದ ಪದಕಗಳನ್ನು ಹೊಂದಿದ್ದರೂ, ಬೆಳ್ಳಿ ಪದಕಗಳ ಲೆಕ್ಕಾಚಾರದಲ್ಲಿ (ಭಾರತ 27, ಉಜ್ಬೇಕಿಸ್ತಾನ್ 25) ಭಾರತ ಮೇಲುಗೈ ಸಾಧಿಸಿ 4ನೇ ಸ್ಥಾನಕ್ಕೇರಿದರೆ ಉಜ್ಬೇಕಿಸ್ತಾನ 5ನೇ ಸ್ಥಾನಕ್ಕೆ ಜಾರಿದೆ.
2022ರ ಏಷ್ಯನ್ ಗೇಮ್ಸ್ ಕೊರೊನಾ ಕಾರಣದಿಂದಾಗಿ 2023ರಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದಿತ್ತು. ಭಾರತವು ಐತಿಹಾಸಿಕ ಪ್ರದರ್ಶನ ನೀಡಿ ಒಟ್ಟು 107 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟದಲ್ಲಿ 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕವನ್ನು ಭಾರತ ಪಡೆದುಕೊಂಡಿತ್ತು. ಶೂಟಿಂಗ್ (22 ಪದಕಗಳು) ಮತ್ತು ಅಥ್ಲೆಟಿಕ್ಸ್ (29 ಪದಕಗಳು) ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅತಿ ಹೆಚ್ಚು ಪದಕಗಳನ್ನು ತಂದುಕೊಟ್ಟಿದ್ದರು.
𝐆𝐎𝐋𝐃 𝐈𝐍 𝐇𝐀𝐍𝐆𝐙𝐇𝐎𝐔. 𝐆𝐎𝐋𝐃 𝐈𝐍 𝐀𝐈𝐂𝐇𝐈-𝐍𝐀𝐆𝐎𝐘𝐀. 🥇
The Men in Blue successfully defend their Asian Games crown and keep India’s cricketing gold streak alive. ✨
Watch the 20th Asian Games Aichi-Nagoya 2026, LIVE on Sony Sports Network TV channels & Sony… pic.twitter.com/8pmI2fo8AH
— Sony Sports Network (@SonySportsNetwk) October 3, 2026
ಚಿನ್ನ:
ಪುರುಷರ ಕ್ರಿಕೆಟ್: ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 19 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಚಿನ್ನ ಗೆದ್ದಿದೆ.
ಮಹಿಳಾ ಗಾಲ್ಫ್ (ವೈಯಕ್ತಿಕ): ಪ್ರಣವಿ ಅರಸ್ ಅವರು ಏಷ್ಯನ್ ಗೇಮ್ಸ್‌ನ ಮಹಿಳಾ ಗಾಲ್ಫ್ ವೈಯಕ್ತಿಕ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.
ಮಹಿಳಾ ರಿಕರ್ವ್ ಅರ್ಚರಿ (ವೈಯಕ್ತಿಕ): 17 ವರ್ಷದ ಕುಮ್ಕುಮ್ ಅನಿಲ್ ಮೊಹೊದ್ ಅವರು ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನದೊಂದಿಗೆ ಒಲಿಂಪಿಕ್ ಕೋಟಾವನ್ನು ಗೆದ್ದಿದ್ದಾರೆ.
ಪುರುಷರ ಕುಸ್ತಿ ಪುರುಷರ 57 ಕೆಜಿ: ಅಮನ್ ಸೆಹ್ರಾವತ್ ಅವರು ಉತ್ತರ ಕೊರಿಯಾದ ಸ್ಪರ್ಧಿಯನ್ನು 11-7 ರಿಂದ ಸೋಲಿಸಿ ಚಿನ್ನ ಮುಡಿಗೇರಿಸಿಕೊಂಡಿದ್ದಾರೆ.
ಹಾಕಿ: ಮಲೇಷ್ಯಾವನ್ನು 5-1 ಗೋಲುಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿ ಚಿನ್ನ ಗೆದ್ದಿದ್ದಾರೆ.
Harmanpreet Singh steps up with a brilliant drag flick to put India 1-0 ahead against Malaysia! 💥
Watch the 20th Asian Games Aichi-Nagoya 2026 LIVE on Sony Sports Network TV channels & Sony LIV.#SonySportsNetwork #SonyLIV #AsianGames #AichiNagoya2026… pic.twitter.com/zn75KJWlvd
— Sony Sports Network (@SonySportsNetwk) October 3, 2026
ಬೆಳ್ಳಿ
ಮಹಿಳಾ ಗಾಲ್ಫ್ (ತಂಡ): ಪ್ರಣವಿ ಅರಸ್, ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್ ಅವರ ತಂಡ ಬೆಳ್ಳಿ ಗೆದ್ದಿದೆ.
ಕುಸ್ತಿ (ಮಹಿಳೆಯರ 53 ಕೆಜಿ ಫ್ರೀಸ್ಟೈಲ್): ಖ್ಯಾತ ಮಹಿಳಾ ಕುಸ್ತಿಪಟು ಅಂತಿಮ್ ಪಂಗಲ್ ಅವರು ಫೈನಲ್ ಪಂದ್ಯದಲ್ಲಿ ಜಪಾನ್‌ನ ಮೊಯೆ ಕಿಯೋಕಾ ವಿರುದ್ಧ ಹೋರಾಡಿ ಬೆಳ್ಳಿ ಪದಕ ಪಡೆದಿದ್ದಾರೆ.
ಕಂಚು
ಬಿಲ್ಲುಗಾರಿಕೆ: ಕಂಚಿನ ಪದಕಕ್ಕಾಗಿ ನಡೆದ ಅತ್ಯಂತ ರೋಮಾಂಚಕ ಪಂದ್ಯದಲ್ಲಿ ನೀರಜ್ ಚೌಹಾಣ್ ಅವರು ಭಾರತದವರೇ ಆದ ಮತ್ತೊಬ್ಬ ಪ್ರಮುಖ ಬಿಲ್ಲುಗಾರ ಧೀರಜ್ ಬೊಮ್ಮದೇವ ಅವರನ್ನು 6-4 ಅಂಕಗಳ ಅಂತರದಿಂದ ಸೋಲಿಸಿ ಕಂಚು ಪಡೆದರು.
ಕುಸ್ತಿ(ಪುರುಷರ ಫ್ರೀಸ್ಟೈಲ್ 97 ಕೆಜಿ): ದೀಪಕ್ ಪೂನಿಯಾ ಅವರು ಮಂಗೋಲಿಯಾದ ಗಂಖುಯಾಗ್ ಗನ್‌ಬಾತರ್ ಅವರನ್ನು 2-1 ಅಂಕಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಸೋಲಿಸಿ ಕಂಚಿನ ಪದಕ ಜಯಿಸಿದರು.

