ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಹಿನ್ನಲೆ ಇಂಧನ ಉಳಿತಾಯ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೀಡಿರುವ ಎಂಟು ಸಲಹೆಗಳಿಗೆ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ವ್ಯಂಗ್ಯ ಮಾಡಿದ್ದಾರೆ. ಜನ ಸಾಮಾನ್ಯರಿಗೆ ಅಗತ್ಯವಾಗಿ ಬೇಕಾಗುವ ಅಡುಗೆ ಎಣ್ಣೆ (Cooking Oil) ಬಳಕೆ ಕಡಿಮೆ ಮಾಡಿ ಅಂತಾರೆ. ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು ಎಂದು ಕುಟುಕಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಈ ಕೇಂದ್ರ ಸರ್ಕಾರ ಇರುವುದೇ ಶ್ರೀಮಂತರಿಗೆ ಪರವಾಗಿ, ತೈಲ ಕೊರತೆ ಇಲ್ಲ ಎಂದು ಪ್ರಧಾನಿ ಮೋದಿ ಬೋಗಳೆ ಹೊಡೆಯುತ್ತಿದ್ದರು, ಈಗ ಉಳಿತಾಯ ಮಾಡಿ ಅಂತಾರೆ, ರಸಗೊಬ್ಬರ ಬಳಕೆ ಕಡಿಮೆ ಮಾಡಿ ಅಂತಾರೆ. ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ – ಭಾರತದ ಇತಿಹಾಸದಲ್ಲೇ ಮಹಾ ಹಗರಣ: ಬಿ.ಕೆ ಹರಿಪ್ರಸಾದ್

ಚುನಾವಣಾ ಸಮಯದ ನಾಲ್ಕು ತಿಂಗಳಲ್ಲಿ ಇವರಿಗೆ ಯಾವುದು ಗೊತ್ತಾಗಿಲ್ಲ, ದೊಡ್ಡ ರ‍್ಯಾಲಿ ಮಾಡಬಹುದು, ಹೊರ ದೇಶಕ್ಕೆ ಇವರು ಹೋಗಬಹುದು. ಆದರೆ ಇತರೆ ಜನರು ಏನು ಮಾಡಬಾರದು. ಮೊದಲು ವರ್ಕ್ ಫ್ರಮ್ ಹೋಮ್ ಕೆಲಸವನ್ನು ಪ್ರಧಾನಿ ಮೋದಿ ಮಾಡಬೇಕು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನೀಟ್ ಪರೀಕ್ಷೆ ಪೇಪರ್ ಲೀಕ್ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು: ಮಧು ಬಂಗಾರಪ್ಪ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಪ್ರಶ್ನೆ ಪತ್ರಿಕೆಯ ಮಹಾ ಹಗರಣ ಇದು. ಈ ನೀಟ್ ಹಗರಣದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತರುತ್ತೇನೆ ಎಂದು ಭರವಸೆ ನೀಡಿದ್ದರು. ಅದೇ ರೀತಿ ಕಪ್ಪು ಮಾರುಕಟ್ಟೆಯಲ್ಲಿ ಕಪ್ಪು ಪ್ರಶ್ನೆ ಪತ್ರಿಕೆ ಹೊರ ತೆಗೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್| ಎ ಖಾತೆಗೆ ಭರ್ಜರಿ ಡಿಸ್ಕೌಂಟ್ ಆಫರ್ – ಗೈಡೆನ್ಸ್ ವ್ಯಾಲ್ಯೂ ಭಾರೀ ಇಳಿಕೆ
ಕಳೆದ 10 ವರ್ಷಗಳಲ್ಲಿ 40ಕ್ಕೂ ಹೆಚ್ಚು ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದರಿಂದ ನರೇಂದ್ರ ಮೋದಿ ಅಸಮರ್ಥ ಪ್ರಧಾನಿ ಅನ್ನೋದು ಸಾಬೀತಾಗಿದೆ. 2019ರಲ್ಲಿ ಶ್ರೀಮಂತರ ಪರ ಪರೀಕ್ಷೆ ಬರೆದದ್ದು ನೋಡಿದ್ದೇವೆ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾ ಗಾಂಧಿ ಮನೆಗೆ ವಾಪಸ್

