ಧಾರವಾಡ: ಬಿಜೆಪಿಯದ್ದು (BJP) ತ್ರಿಬಲ್ ಎಂಜಿನ್ ಸರ್ಕಾರ. ಇವರು ಕರ್ನಾಟಕ ಉಳಿಸುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಪ್ರಶ್ನಿಸಿದರು.
ಧಾರವಾಡದಲ್ಲಿ (Dharawda) ಮಾತನಾಡಿದ ಅವರು, ಸಂವಿಧಾನದ ವ್ಯವಸ್ಥೆ ಅಮಿತ್ ಶಾ (Amit Shah) ತಿಳಿದುಕೊಂಡಿದ್ದಾರಾ ಎಂದು ನಾನು ಅವರಿಗೆ ಕೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಬಂದಾಗ ನಮ್ಮ ಸಂವಿಧಾನ ಆಗಿದೆ. ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿ. ಸಂವಿಧಾನದಲ್ಲಿ ಯಾರು ಯಾವ ವೃತ್ತಿಯನ್ನಾದರೂ ಆರಿಸಿಕೊಳ್ಳಬಹುದು. ಚುನಾವಣೆಯಲ್ಲಿ ಯಾರು ಬೇಕಾದರೂ ನಿಲ್ಲಬಹುದು. ಜನರ ಆಶೀರ್ವಾದಿಂದ ಜನಪ್ರತಿನಿಧಿ ಆಗ್ತಾರೆ ಎಂದು ಬಿಜೆಪಿಯ ಕುಟುಂಬ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪ್ರಯೋಗಿಸಿರೋ ಅಸ್ತ್ರಕ್ಕೆ ಹೈಕಮಾಂಡ್ ಒಪ್ಪುತ್ತಾ?
Advertisement
Advertisement
ನಾವ್ಯಾರೂ ಹಿಂಬಾಗಿಲಿನಿಂದ ಪ್ರವೇಶ ಮಾಡಿಲ್ಲ. ಹೋರಾಟದ ಮೂಲಕ ನಾವು ಬಂದಿದ್ದೇವೆ. ಜನ ಸ್ವೀಕಾರ ಮಾಡಿದಾಗಲೇ ನಾವು ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಇವರಿಂದ ಅನುಮತಿ ತಗೊಬೇಕಾ ಎಂದು ಕೇಳಿದರು.
Advertisement
ಬಿಜೆಪಿಯಲ್ಲಿ ಎಷ್ಟು ಕುಟುಂಬ ರಾಜಕಾರಣ ಇಲ್ಲ ಹೇಳಿ? ಬಿಸಿಸಿಐಯಲ್ಲಿ ಅವರ ಮಗನೇ (ಅಮಿತ್ ಶಾ ಪುತ್ರ) ಇದ್ದಾನೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅವನಿಗೆ ಅಧಿಕಾರ ಕೊಟ್ಟಿದ್ದಾರೆ. ಅವನ ಸಾಧನೆ ಏನು? ಬಿಜೆಪಿಯಲ್ಲಿ ಎಷ್ಟು ಜನ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲ? ಹುಬ್ಬಳ್ಳಿ, ಧಾರವಾಡದಲ್ಲೇ ಎಷ್ಟು ಜನ ಇದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು
Advertisement
ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣನಾ? ಇದು ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಸಂವಿಧಾನದ ಚೌಕಟ್ಟಿನಲ್ಲಿ ಯಾರು ಬೇಕಾದರು ಚುನಾವಣೆಗೆ ನಿಲ್ಲಬಹುದು. ತಮಗೆ ಬೇಕಾದ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು. ಈ ವಿಚಾರವಾಗಿ ಅಮಿತ್ ಶಾ ಸರ್ಟಿಫಿಕೇಟ್ ನನಗೆ ಬೇಡ. ನಾವು ಜನರ ನೋವಿಗೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಅವರಂತೆ ಅಮಾಯಕರ ಬಲಿ ಕೊಟ್ಟು ರಾಜಕಾರಣ ಮಾಡಲ್ಲ. ಅವರ ದುರಹಂಕಾರ ಏನಾಗಲಿದೆ ನೋಡಿ ಟಾಂಗ್ ಕೊಟ್ಟರು. ಇದನ್ನೂ ಓದಿ:
ಇದು ಯುಪಿ, ಬಿಹಾರ ಅಲ್ಲ. ನಮ್ಮ ರಾಜ್ಯದಲ್ಲಿ ಅವರ ಕೊಡುಗೆ ಏನು ಅಂತಾ ಹೇಳಲಿ. ಮಹದಾಯಿ ಸರಿ ಮಾಡಿದ್ದಾರಾ? ಅಲ್ಲಿ ಗೋವಾದಿಂದ ತಕರಾರು ತೆಗೆಸುತ್ತಾರೆ. ಇದು ತ್ರಿಬಲ್ ಎಂಜಿನ್ ಸರ್ಕಾರ. ಇವರು ಕರ್ನಾಟಕ ಉಳಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k