– ಇಬ್ಬರು ಸೀಕ್ರೆಟ್ ರೂಮ್ ಗೆ, ಉಳಿದ 6 ಮಂದಿ ಮನೆಗೆ
‘ಬಿಗ್ ಬಾಸ್ ಮಲಯಾಳಂ 8’ರಲ್ಲಿ (Bigg Boss Malayalam 8) ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಒಂದೇ ದಿನ ಬಿಗ್ ಬಾಸ್ ಮನೆಯಿಂದ 8 ಸ್ಪರ್ಧಿಗಳು ಔಟ್ ಆಗಿದ್ದಾರೆ. ಈ ಬೆಳವಣಿಗೆ ವೀಕ್ಷಕರಲ್ಲಿ ಅಷ್ಟೇ ಅಲ್ಲ, ಮನೆಯ ಸ್ಪರ್ಧಿಗಳಿಗೂ ಶಾಕ್ ನೀಡಿದೆ.
ಇತ್ತೀಚಿನ ವಾರಾಂತ್ಯದ ಸಂಚಿಕೆಯಲ್ಲಿ, ಬಿಗ್ ಬಾಸ್ ಶೋನ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 6 ಸ್ಪರ್ಧಿಗಳು ಮನೆಯಿಂದ ಹೊರಹೋಗಿದ್ದಾರೆ. ಇದನ್ನೂ ಓದಿ: ಸಿದ್ಲಿಂಗು ಟೀಚರ್ ರಮ್ಯಾಗೆ ವಿಜಯ್ ಪ್ರಸಾದ್ ಬರೆದ ಹೊಸ ಕಥೆ
ಮನೆಯಲ್ಲಿಯೇ ಮೊದಲ ಬಾರಿಗೆ ನಡೆಯಲಿರುವ ಸಾಮೂಹಿಕ ಹೊರಹಾಕುವಿಕೆ (mass eviction) ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ ಎಂದು ಬಿಗ್ ಬಾಸ್ ಘೋಷಿಸಿದರು. ಈ ಘೋಷಣೆಯನ್ನು ಕೇಳಿ ಮನೆಯ ಸದಸ್ಯರು ಆಶ್ಚರ್ಯಚಕಿತರಾದರು. ನಂತರ ಬಿಗ್ ಬಾಸ್ ಜನಪ್ರಿಯ ‘ಫ್ರೀಜ್ ಟಾಸ್ಕ್’ (freeze task) ಅನ್ನು ಪ್ರಾರಂಭಿಸಿದರು. ಅವರು ಸ್ಪರ್ಧಿಗಳ ಹೆಸರುಗಳನ್ನು ಕರೆದು, ಆಯಾ ಸ್ಪರ್ಧಿಗಳನ್ನು ‘ಫ್ರೀಜ್’ ಆಗುವಂತೆ (ಅಂದರೆ, ಅದೇ ಸ್ಥಿತಿಯಲ್ಲಿ ಸ್ಥಿರವಾಗಿ ನಿಲ್ಲುವಂತೆ) ಸೂಚಿಸಿದರು. ಆರಂಭದಲ್ಲಿ, ಮನೆಯ ಸದಸ್ಯರು ಈ ಕಾರ್ಯವನ್ನು ತಮಾಷೆಯಾಗಿ ಸ್ವೀಕರಿಸಿದರು. ಪರಸ್ಪರರನ್ನು ರೇಗಿಸುತ್ತಾ ನಗುತ್ತಿದ್ದರು. ಆದರೆ, ಬಿಗ್ ಬಾಸ್ ಎಲ್ಲರನ್ನೂ ‘ಫ್ರೀಜ್’ ಆಗುವಂತೆ ಸೂಚಿಸಿ, ರಾಕೇಶ್ ಅವರನ್ನು ಮುಕ್ತಗೊಳಿಸಿ ಮನೆಯಿಂದ ಹೊರಹಾಕಲಾಗುವುದು ಎಂದು ಘೋಷಿಸಿದರು. ಅದುವರೆಗೂ ಗೇಲಿ ಮಾಡುತ್ತಿದ್ದ ಸ್ಪರ್ಧಿಗಳು, ಬಿಗ್ ಬಾಸ್ ಘೋಷಣೆಯಿಂದ ಶಾಕ್ ಆದರು.

ಬಿಗ್ ಬಾಸ್ ಘೋಷಣೆಯಿಂದ ರಾಕೇಶ್ ತೀವ್ರ ಆಘಾತಕ್ಕೊಳಗಾದರು. ಯಾರೊಂದಿಗೂ ವಿದಾಯ ಹೇಳದೆ ಹೊರಡಬೇಕಾದ ಪರಿಸ್ಥಿತಿಯ ಬಗ್ಗೆ ಬೇಸರಗೊಂಡರು. ತಕ್ಷಣವೇ ಎಲ್ಲರನ್ನೂ ಮುಕ್ತಗೊಳಿಸಲಾಯಿತು. ಮನೆಯ ಸದಸ್ಯರು ಅವರಿಗೆ ಬೀಳ್ಕೊಡುಗೆ ನೀಡಲು ಮುಂದಾದರು.
ರಾಕೇಶ್ ಹೊರಬಂದ ನಂತರ, ‘ಫ್ರೀಜ್’ ಕಾರ್ಯ ಮುಂದುವರಿಯಿತು. ಸಾಮೂಹಿಕ ಹೊರಹಾಕುವಿಕೆಯ ಭಾಗವಾಗಿ ಲೋಲೆಟ್ಟಾ ಅವರನ್ನು ಕೂಡ ಮನೆಯಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂದು ಬಿಗ್ ಬಾಸ್ ಘೋಷಿಸಿದರು. ಮನೆಯೊಳಗೆ ಲೋಲೆಟ್ಟಾ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದ ಅಂಜಲಿ, ಘೋಷಣೆಯಾದ ತಕ್ಷಣವೇ ಖುಷಿ ವ್ಯಕ್ತಪಡಿಸಿದರು. ನಂತರ ಲೋಲೆಟ್ಟಾ ಎಲ್ಲರಿಗೂ ವಿದಾಯ ಹೇಳಿ ಮನೆಯಿಂದ ಹೊರನಡೆದರು. ಇದನ್ನೂ ಓದಿ: ‘ಆನಂದ್’ ಮೂಲಕ ಶಿವಣ್ಣ ಪರಿಚಯಿಸಿದ್ದ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ನಿಧನ
‘ಅಗ್ನಿಪರೀಕ್ಷೆ’ ಎಂಬ ಸಾಮಾನ್ಯರಿಗಾಗಿ ನಡೆಸಲಾದ ಆಡಿಷನ್ ಕಾರ್ಯಕ್ರಮದಲ್ಲಿ ರಾಕೇಶ್ ಮತ್ತು ಲೋಲೆಟ್ಟಾ ವಿಜೇತರಾಗಿದ್ದರು. ಲೋಲೆಟ್ಟಾ ತಮ್ಮ ಚುರುಕುತನದಿಂದ ಗಮನ ಸೆಳೆದರೆ, ರಾಕೇಶ್ ಮನೆಯಲ್ಲಿ ಉತ್ತಮ ಮನರಂಜನೆ ನೀಡುವ ವ್ಯಕ್ತಿ ಎಂದು ಪ್ರಶಂಸೆಗೆ ಪಾತ್ರರಾಗಿದ್ದರು.
ಈ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ರಾಕೇಶ್ ಮತ್ತು ಲೋಲೆಟ್ಟಾ ಅವರೊಂದಿಗೆ ಸುಮೆಶ್, ಗಾಯತ್ರಿ ಸುರೇಶ್, ಜಸೀಲಾ ಪರ್ವೀನ್ ಮತ್ತು ಶ್ರೀಲಕ್ಷ್ಮಿ ಅರಕ್ಕಲ್ ಅವರನ್ನು ಮನೆಯಿಂದ ಹೊರಹಾಕಲಾಯಿತು. ಮತ್ತೊಂದೆಡೆ, ಮೃದುಲಾ ವಿಜಯ್ ಮತ್ತು ಅಂಜಲಿ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿದೆ ಎಂದು ಘೋಷಿಸಲಾಗಿದ್ದರೂ, ಅವರಿಬ್ಬರೂ ‘ಸೀಕ್ರೆಟ್ ರೂಮ್’ (ರಹಸ್ಯ ಕೊಠಡಿ) ಸೇರಿದ್ದಾರೆ. ಅಲ್ಲಿಂದ ಕಾರ್ಯಕ್ರಮದ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದಾರೆ. ಶೀಘ್ರದಲ್ಲೇ ಅವರಿಬ್ಬರೂ ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ಕೊಡುವ ನಿರೀಕ್ಷೆಯಿದೆ.

