ಕೈವ್: ಉಕ್ರೇನ್ನ (Ukraine) ಮೇಲೆ ರಷ್ಯಾ ಡ್ರೋನ್ ದಾಳಿ (Russia Drone Attack) ನಡೆಸಿದ ಪರಿಣಾಮ ಸುಮಿ ಪ್ರದೇಶದಲ್ಲಿರುವ ಭಾರತದ ಕುಸುಮ್ ಗ್ರೂಪ್ಗೆ (Kusum Group) ಸೇರಿದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸಗೊಂಡಿದೆ. ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ರಷ್ಯಾ ಡ್ರೋನ್ ದಾಳಿಯಿಂದ ಫಾರ್ಮಾ ಘಟಕದ ಮುಖ್ಯ ಕಟ್ಟಡ ಬಹುತೇಕ ಸಂಪೂರ್ಣವಾಗಿ ಧ್ವಂಸಗೊAಡಿದೆ. ಮೃತಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ಗಳು ದಾಳಿ ನಡೆಸಿದ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ಹೊಗೆ ಮೇಲಕ್ಕೆ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಸಿಎಂ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ವಿಜಯೇಂದ್ರ ಕಿಡಿ

1994ರಲ್ಲಿ ಆರಂಭವಾಗಿದ್ದ ಕುಸುಮ್ ಗ್ರೂಪ್:
ಕುಸುಮ್ ಗ್ರೂಪ್ 1994ರಲ್ಲಿ ಉಕ್ರೇನ್ಗೆ ಭಾರತೀಯ ಔಷಧಗಳನ್ನು ರಫ್ತು ಮಾಡುವ ವಿತರಕ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಭಾರತೀಯ ಮೂಲದ ರಾಜೀವ್ ಗುಪ್ತಾ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
2002ರಲ್ಲಿ ಇತರ ಕಂಪನಿಗಳ ಉತ್ಪನ್ನಗಳ ವಿತರಣೆಯನ್ನು ನಿಲ್ಲಿಸಿದ ಸಂಸ್ಥೆ, ತನ್ನದೇ ಬ್ರ್ಯಾಂಡ್ಗಳ ಔಷಧಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಆರಂಭಿಸಿತು. ಬಳಿಕ ಔಷಧ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿತು. 2007ರಲ್ಲಿ ಭಾರತದಲ್ಲಿ ಔಷಧ ತಯಾರಿಕಾ ಘಟಕವನ್ನು ಆರಂಭಿಸಿದ ಸಂಸ್ಥೆ, 2009ರಲ್ಲಿ ಉಕ್ರೇನ್ನ ಸುಮಿಯಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಿತು. ನಂತರ ಭಾರತದಲ್ಲಿ ಇನ್ನೂ ಎರಡು ತಯಾರಿಕಾ ಘಟಕಗಳನ್ನು ಆರಂಭಿಸಿತು. ಇದನ್ನೂ ಓದಿ: CEC ಜ್ಞಾನೇಶ್ ಕುಮಾರ್ ವಿರುದ್ಧ ʻಕೈʼ ಸರ್ಕಾರದ ತನಿಖೆ – 20 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ..!
50ಕ್ಕೂ ಹೆಚ್ಚು ಜೆನೆರಿಕ್ ಔಷಧಗಳ ಉತ್ಪಾದನೆ:
ಕುಸುಮ್ ಗ್ರೂಪ್ 50ಕ್ಕೂ ಹೆಚ್ಚು, ಪ್ರಮುಖವಾಗಿ ಜೆನೆರಿಕ್ ಔಷಧಗಳನ್ನು ತಯಾರಿಸುತ್ತದೆ. ಸಂಸ್ಥೆಯ ಉತ್ಪನ್ನಗಳು 9ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ. ಉಕ್ರೇನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಮತ್ತು ಫಿಲಿಪ್ಪೀನ್ಸ್ ಸಂಸ್ಥೆಯ ಪ್ರಮುಖ ಮಾರುಕಟ್ಟೆಗಳಾಗಿವೆ. ರಷ್ಯಾ-ಉಕ್ರೇನ್ ಯುದ್ಧದ ಹಲವು ವರ್ಷಗಳ ನಡುವೆಯೂ ಸುಮಿಯಲ್ಲಿರುವ ಕುಸುಮ್ ಘಟಕ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದೀಗ ರಷ್ಯಾ ಡ್ರೋನ್ ದಾಳಿಯಿಂದ ಘಟಕಕ್ಕೆ ಭಾರೀ ಹಾನಿಯಾಗಿದೆ. ದಾಳಿಯಿಂದ ಉಂಟಾದ ನಷ್ಟದ ಪ್ರಮಾಣ ಕನಿಷ್ಠ 400 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 2 ಚಿರತೆ, 1 ಸಿಂಹ ದತ್ತು ಪಡೆದ ಸತೀಶ್ ಜಾರಕಿಹೊಳಿ ಪುತ್ರ

