ದಾವಣಗೆರೆ: ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ನಾಪತ್ತೆ ಪ್ರಕರಣಕ್ಕೆ ಈಗ ಬೆಚ್ಚಿ ಬೀಳಿಸುವ ಮಹಾ ಟ್ವಿಸ್ಟ್ ಸಿಕ್ಕಿದೆ. ಮೇಲ್ನೋಟಕ್ಕೆ ಸಾಧಾರಣ ನಾಪತ್ತೆ ಎನ್ನಲಾಗುತ್ತಿದ್ದ ಈ ಪ್ರಕರಣದ ಹಿಂದೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾದರಿಯ ಬೃಹತ್ ವಂಚನಾ ಜಾಲ ಬಯಲಾಗಿದೆ.
ಷೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 1 ಲಕ್ಷ ರೂ. ಲಾಭ ಕೊಡೋದಾಗಿ ಆಸೆ ಹುಟ್ಟಿಸಿ ರಮೇಶ್ ಕುಮಾರ್ ಎಂಬಾತ ಕೆಲವರಿಂದ 30 ಕೋಟಿ ರೂ. ಅಧಿಕ ಹಣ ಪಡೆದಿದ್ದ. ಇದೀಗ ಷೇರು ಪೇಟೆಯಲ್ಲಿ ಹಣ ಕಳೆದುಕೊಂಡು ಹೆಂಡ್ತಿ-ಮಕ್ಕಳ ಜೊತೆ ಊರು ಬಿಟ್ಟಿದ್ದಾನೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಪನಾಮ ಧ್ವಜ ಹೊತ್ತ ಬೃಹತ್ ಹಡಗು ಮುಳುಗಡೆ
ಹಣ ಪಡೆದುಕೊಳ್ಳುವಾಗ 1 ಲಕ್ಷ ರೂ.ಗೆ ಪ್ರತಿ ತಿಂಗಳು 8 ಸಾವಿರ ರೂ. ಬಡ್ಡಿ ಕೊಡುವ ಆಮಿಷ ಒಡ್ಡಿದ್ದ. ಈ ರೀತಿ ಅಂದಾಜು ಮೊತ್ತ 25 ರಿಂದ 30 ಕೋಟಿ ರೂ. ಹಣ ಪೀಕಿದ್ದ ಎನ್ನಲಾಗ್ತಿದೆ. 150ಕ್ಕೂ ಹೆಚ್ಚು ಫೋಟೋಗ್ರಾಫರ್ಸ್, ಪತ್ರಕರ್ತರು, ನೌಕರರು ಹಾಗೂ ಸಾರ್ವಜನಿಕರು ಮೋಸಕ್ಕೆ ಒಳಗಾಗಿದ್ದಾರೆ.
ಹಣ ನೀಡಿದ ನೂರಾರು ಮಂದಿ ರಮೇಶ್ ಕುಮಾರ್ ಮನೆಗೆ ಮುಗಿಬಿದ್ದು ಗಲಾಟೆ ಆರಂಭಿಸಿದ್ದರು. ಜನರ ಒತ್ತಡ ಹಾಗೂ ಸಾಲದ ಸುಳಿಗೆ ಸಿಲುಕಿ ಕಂಗಾಲಾದ ರಮೇಶ್ ಕುಮಾರ್, ಅನ್ಯಮಾರ್ಗ ಕಾಣದೇ ಕುಟುಂಬದ ನಾಲ್ವರೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದಾರೆ. ಈತನ ವಿರುದ್ಧ 2023ರಲ್ಲೇ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆದರೂ ಆತನನ್ನು ಮಟ್ಟಹಾಕದ ಕಾರಣ ಇಂದು ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.ಇದನ್ನೂ ಓದಿ: ಸಿಎಂ ರೇವಂತ್ ರೆಡ್ಡಿ ಅಮೆರಿಕ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ ವಿದೇಶಾಂಗ ಸಚಿವಾಲಯ

