ಬೆಂಗಳೂರು: ಇಡಿ ದಾಳಿ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಬೆಂಗಳೂರಿನ ನಿವಾಸಕ್ಕೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಎಸ್. ಲಾಡ್ ( Santosh Lad) ಅವರು ಇಂದು ಭೇಟಿ ನೀಡಿ ಮಾತುಕತೆ ನಡೆಸಿದರು.
ಜಾರಕಿಹೊಳಿ ಅವರ ಜೊತೆ ಹಲವು ವಿಷಯಗಳ ಕುರಿತು ಲಾಡ್ ಅವರು ವೇಳೆ ಚರ್ಚೆ ನಡೆಸಿದರು.
ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ಇ,ಡಿ) ಅಧಿಕಾರಿಗಳು 3 ದಿನಗಳ ಹಿಂದೆ ದಾಳಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಲಾಡ್ ಅವರ ಭೇಟಿ ಮಹತ್ವ ಪಡೆದಿದೆ.
ಜಾರಕಿಹೊಳಿಗೆ ನೈತಿಕ ಬೆಂಬಲ ಕೊಟ್ಟಿದ್ದರು ಲಾಡ್
ಜಾರಕಿಹೊಳಿ ಅವರ ನಿವಾಸಗಳ ಮೇಲೆ ಬುಧವಾರ ಇಡಿ ಅಧಿಕಾರಿಗಳು ದಾಳಿ ಮಾಡಿದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಾಡ್ ಅವರು, ಪ್ರಕರಣದಲ್ಲಿ ಸತೀಶ್ ಅವರು ಮುಕ್ತರಾಗಿ ಬರುತ್ತಾರೆ. ಜಾರಕಿಹೊಳಿ ಅವರ ಸಹೋದರನಾಗಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇನೆ. ಅಲ್ಲದೆ ಇಡೀ ಕಾಂಗ್ರೆಸ್ ಪಕ್ಷ, ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಅವರ ಜೊತೆ ಇರಲಿದ್ದಾರೆ ಎಂದು ಹೇಳಿದ್ದರು.ಇದನ್ನೂ ಓದಿ: ರಾಜಕೀಯ ನಿವೃತ್ತಿ ಕುರಿತು ಬಹಿರಂಗ ಹೇಳಿಕೆ ಬೇಡ – ಸಿದ್ದರಾಮಯ್ಯಗೆ ರಾಹುಲ್ ಸಲಹೆ

