ಹೈದಾರಾಬಾದ್: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ತೆಲಂಗಾಣ (Telangana) ದಲ್ಲಿ ಟಿಆರ್ ಎಸ್ ಶಾಸಕರನ್ನು ಖರೀದಿಸಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಆಪರೇಷನ್ ಕಮಲಕ್ಕಾಗಿ 15 ಕೋಟಿ ರೂ. ತಂದ ಆರೋಪದ ಮೇಲೆ ಹಣದ ಸಮೇತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಒಳಗಾದವರನ್ನು ಹರಿಯಾಣದ ಫರಿದಾಬಾದ್‍ನ ಅರ್ಚಕ ಸತೀಶ್ ಶರ್ಮಾ, ಅಲಿಯಾಸ್ ರಾಮಚಂದ್ರ ಭಾರತಿ, ತಿರುಪತಿಯ ಧರ್ಮದರ್ಶಿ ಡಿ ಸಿಂಹಯಾಜಿ ಮತ್ತು ಉದ್ಯಮಿ ನಂದಕುಮಾರ್ ಎಂದು ಗುರುತಿಸಲಾಗಿದೆ.
Advertisement
The ‘Three Agents’ of Amit shah who came to bribe TRS MLAs are now decoded & bursted.
Here are evidences of their links with BJP & RSS ????#TelanganaNotForSale pic.twitter.com/NiHtjbAD8k
— YSR (@ysathishreddy) October 26, 2022
Advertisement
ಹೈದರಾಬಾದ್‍ನ ಅಜೀಜ್ ನಗರದ ಫಾರ್ಮ್ ಹೌಸ್‍ನಲ್ಲಿ ಪೊಲೀಸರು 15 ಕೋಟಿ ನಗದು ಸೀಜ್ ಮಾಡಿದ್ದಾರೆ. ನಾಲ್ವರು ಟಿಆರ್‍ಎಸ್ ಶಾಸಕರನ್ನು ಖರೀದಿಸಲು ಹಣ ತಂದ ಆರೋಪದ ಮೇಲೆ ದೆಹಲಿಯಿಂದ ಬಂದಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಿಫ್ಟ್ ನೀಡೋ ನೆಪದಲ್ಲಿ 18 ಲಕ್ಷ ರೂ. ವಂಚನೆ – ವಿದೇಶಿ ಜೋಡಿಯಿಂದ ಮಹಿಳೆಗೆ ಪಂಗನಾಮ
Advertisement
Advertisement
ಪಕ್ಷಗಳನ್ನು ಬದಲಾಯಿಸಲು ಆಮಿಷ ಮತ್ತು ಲಂಚ ನೀಡಲಾಗುತ್ತಿದೆ ಎಂದು ಶಾಸಕರು ಪೊಲೀಸರಿಗೆ ಕರೆ ಮಾಡಿದ್ದರು. ಪಕ್ಷಗಳನ್ನು ಬದಲಾಯಿಸಲು ಅವರಿಗೆ ದೊಡ್ಡ ಮೊತ್ತದ ಹಣ, ಒಪ್ಪಂದಗಳು ಮತ್ತು ಹುದ್ದೆಗಳನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
We received information from TRS MLAs that they were being lured, by money, contracts, and posts. We raided the farmhouse and noticed three persons. We will initiate legal action and carry investigation into the luring matter: Cyberabad CP Stephen Ravindra pic.twitter.com/ke6D8SEAzS
— ANI (@ANI) October 26, 2022
ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರ ಫಾರ್ಮ್‍ಹೌಸ್‍ನಲ್ಲಿ ದಲ್ಲಾಳಿಯಾಗಿ ಡೀಲ್ ನಡೆದಿದೆ ಎನ್ನಲಾಗಿದೆ. 2019 ರಿಂದ ಬಿಜೆಪಿಯು ತೆಲಂಗಾಣದಲ್ಲಿ ಆಪರೇಷನ್ ಕಮಲವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.