Bengaluru CityCrimeDistrictsKarnatakaLatestMain Post

ಬೆಂಗ್ಳೂರು ವಾಹನ ಸವಾರರೇ ಎಚ್ಚರ – ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಸಿಗಲ್ಲ ಇನ್ಶೂರೆನ್ಸ್

– ರೂಲ್ಸ್ ಬ್ರೇಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್
– 11 ತಿಂಗಳಲ್ಲಿ 164 ಕೋಟಿ ದಂಡ ವಸೂಲಿ

ಬೆಂಗಳೂರು: ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಸವಾಲಾಗಿದೆ. ನಿಯಮ ಉಲ್ಲಂಘನೆ (Traffic Violation) ಮಾಡ್ತಿದ್ದರೂ ಹಲವೆಡೆ ಅವರ ಮೇಲೆ ನಿಗಾವಹಿಸುವುದು ಪೊಲೀಸರಿಗೆ ಕಷ್ಟದ ಕೆಲಸವಾಗಿತ್ತು. ಈ ಎಲ್ಲ ಸಮಸ್ಯೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್‌ ಮಾಡಿದ್ದು, ಐಟಿಎಂ (ITM) ಸಿಸ್ಟಮ್ ಬಳಕೆಗೆ ಮುಂದಾಗಿದೆ.

ಹೌದು. ಇನ್ಮುಂದೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸ್ (Traffic Police) ಇಲಾಖೆ ಟೆಕ್ನಾಲಜಿ ಸ್ಟ್ರೈಕ್‌ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಕಡಿವಾಣಕ್ಕೆ ಮುಂದಾಗಿದೆ. ನಗರದ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ (Police Department) ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಆರಂಭಿಸಿದೆ. ಇದನ್ನೂ ಓದಿ: ತೋಟದ ಮನೆಯಲ್ಲಿದ್ದ ಸಾಕು ನಾಯಿ ಕೊಂದ ಚಿರತೆ- ಮನೆಯಿಂದ ಹೊರಬರಲು ಅನ್ನದಾತರು ಹಿಂದೇಟು

ಈ ಮೂಲಕ ನಿಯಮ ಉಲ್ಲಂಘನೆ ಮಾಡಿದ್ರೆ ಅಂತಹ ವಾಹನ ಮಾಲೀಕರ ಮೊಬೈಲ್‌ಗೆ (Mobile) ಎಸ್‌ಎಂಎಸ್ ಮೂಲಕ ಇ-ಚಲನ್ ರವಾನೆಯಾಗಲಿದೆ. ಜೊತೆಗೆ ಆ ವಾಹನದ ಸವಾರ ಮಾಡಿದ ಉಲ್ಲಂಘನೆ ವೀಡಿಯೋ ಕೂಡ ನೋಟಿಸ್ ಜೊತೆ ಮಾಲೀಕನ ಕೈ ಸೇರಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ 259 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವ ಕ್ಯಾಮೆರಾಗಳು ಮತ್ತು 80 ರೆಡ್‌ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ಮೂಲಕ ಸಂಚಾರ ಉಲ್ಲಂಘನೆ ಮಾಡುವವರ ಪತ್ತೆ ಸುಗಮವಾಗಲಿದೆ. ಇದನ್ನೂ ಓದಿ: ವರುಣಾ ಪಿಚ್ ಸ್ಟಡಿಗೆ ಖುದ್ದು ಇಳಿದ ಸಿದ್ದರಾಮಯ್ಯ- ವರುಣಾದಲ್ಲಿ ಮಗನ ಜೊತೆ ಪ್ರವಾಸ

ಹೇಗೆ ಕೆಲಸ ಮಾಡುತ್ತೆ ಎಟಿಎಂ ಸಿಸ್ಟಮ್?
ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕಣ್ಣಿಡುವ ಜೊತೆಗೆ, ಪ್ರತಿ ಮೂಮೆಂಟ್ ರೆಕಾರ್ಡ್ ಮಾಡುತ್ತೆ. 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ನಿಯಮ ಉಲ್ಲಂಘನೆಯಾಗುವುದನ್ನು ರೆಕಾರ್ಡ್ ಮಾಡುತ್ತದೆ. ತ್ರಿಬಲ್ ರೈಡಿಂಗ್ ಇದ್ರೆ, ಸೀಟ್ ಬೆಲ್ಟ್ ಹಾಕದಿದ್ರೆ, ಜೀಬ್ರಾ ಕ್ರಾಸ್ ದಾಟಿದ್ರೆ ಫೋಟೋ ಕ್ಲಿಕ್ ಮಾಡಿ ದಂಡದ ಬಿಸಿ ಮುಟ್ಟಿಸಲು ಸಹಕಾರಿಯಾಗುತ್ತೆ. ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿರೋ ಕ್ಯಾಮೆರಾಗಳು, ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್‌ಗಳಲ್ಲೇ ವಿಡಿಯೋ ಜೊತೆ ದಂಡದ ನೋಟೀಸ್ ಬರುತ್ತೆ. ಮೊಬೈಲ್‌ನಲ್ಲೆ ಕ್ಯೂಆರ್ ಕೋಡ್ ಮೂಲಕ ಫೈನ್ ಕಟ್ಬೇಕು. ಫೈನ್ ಕಟ್ಟಿಲ್ಲವಾದರೆ, 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಬರುತ್ತೆ. ನೋಟಿಸ್ ಬಂದ ನಂತರ ಠಾಣೆಯಲ್ಲಿ ಫೈನ್ ಕಟ್ಟುವಂತಿಲ್ಲ. ಕೋರ್ಟ್‌ಗೆ (Court) ಹೋಗಿ ಕಟ್ಟಬೇಕಾಗುತ್ತದೆ.

ಲಕ್ಷ ಲಕ್ಷ ಕೇಸ್ – ನೂರಾರು ಕೋಟಿ ದಂಡ ವಸೂಲಿ:
ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ಕೇಸ್‌ಗಳು ದಾಖಲಾಗುತ್ತಿವೆ. ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿ 96 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ. 11 ತಿಂಗಳಲ್ಲಿ ಬರೋಬ್ಬರಿ 164 ಕೋಟಿ ರೂ. ದಂಡದ ಮೊತ್ತ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ಒಂದು ಕೋಟಿ ಕೇಸ್ ಆಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದ ಯಾವ ನಗರದಲ್ಲೂ 1 ಕೋಟಿ ಕೇಸ್ ಹಾಕಿದ ಉದಾಹರಣೆ ಇಲ್ವಂತೆ. ಬೆಂಗಳೂರು ನಗರ ಒಂದರಲ್ಲೇ ಇಷ್ಟು ಕೇಸ್ ದಾಖಲಾಗುತ್ತಿದೆ. ಸಂಚಾರ ದಟ್ಟಣೆಯಲ್ಲಿ ಹೆಸರುವಾಸಿಯಾಗಿದ್ದ ಸಿಲಿಕಾನ್ ಸಿಟಿ ಈಗ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡ ಕಟ್ಟುವಲ್ಲೂ ರೆಕಾರ್ಡ್ ಮಾಡುತ್ತಿದೆ.

YouTube video

ಪೊಲೀಸರ ಪ್ಲ್ಯಾನ್‌ ಏನು?
ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್‌ಓಸಿ ಕೊಡಬೇಕಾಗುತ್ತದೆ. ಎನ್‌ಓಸಿ ಕೊಡದಿದ್ರೆ ಇನ್ಶೂರೆನ್ಸ್ ನವೀಕರಣ ಆಗದೇ ಇರುವಂತೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಯೆಲ್ಲೋ ಬೋರ್ಡ್ ಗಾಡಿಗಳ ಎಫ್‌ಸಿ ಹಾಗೂ ವೈಟ್ ಬೋರ್ಡ್ ಗಾಡಿಗಳ ವಿಮೆ ಮಾಡಿಸಲು ಹೋದಾಗ ಅಲ್ಲಿಯೇ ಫೈನ್ ಕಲೆಕ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಕೆಲವೆ ದಿನಗಳಲ್ಲಿ ಈ ಪ್ಲ್ಯಾನ್‌ ರೂಪಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.

Live Tv

Leave a Reply

Your email address will not be published. Required fields are marked *

Back to top button