ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಬಾಡಿಗೆ ಮನೆ (Rented House), ಅಪಾರ್ಟ್‌ಮೆಂಟ್‍ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಟೆಕ್ಕಿಗಳಿಗೆ ವರ್ಕ್ ಫ್ರಮ್ ಹೋಂ ಮುಗಿಯುತ್ತಿದ್ದಂತೆ ಬಾಡಿಗೆ ರೇಟ್ ದಿಢೀರ್ ಏರಿಕೆಯಾಗಿದೆ. ಆದರೆ ಗಗನಕ್ಕೇರಿದ ಮನೆ ಬಾಡಿಗೆಯಿಂದ ಟೆಕ್ಕಿಗಳಿಗೆ ಸಂಕಷ್ಟ ಎದುರಾಗಿದ್ದು, ದುಬಾರಿ ಬಾಡಿಗೆಗೆ ಫುಲ್ ಸುಸ್ತಾಗಿದ್ದಾರೆ.
ಕೋವಿಡ್ (Covid 19) ವೇಳೆ ಸ್ವಂತ ಊರುಗಳತ್ತ ಮುಖ ಮಾಡಿದ್ದ ಟೆಕ್ಕಿಗಳು, ವರ್ಕ್ ಫ್ರಂ ಹೋಮ್ (Work From Home) ಮೂಲಕವೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಬಹುತೇಕ ಐಟಿ ಕಂಪನಿಗಳು ಇದೀಗ ಆಫ್ ಲೈನ್ ಕೆಲಸವನ್ನು ಶುರು ಮಾಡಿಕೊಂಡಿವೆ. ಹೀಗಾಗಿ ಬಹುತೇಕ ಉದ್ಯೋಗಿಗಳು ವಿವಿಧ ರಾಜ್ಯಗಳಿಂದ ನಗರಕ್ಕೆ ಮರಳಿದ್ದಾರೆ. ಆದರೆ 2021ಕ್ಕೆ ಹೋಲಿಸಿದರೆ 2023ರಲ್ಲಿ ಸರಾಸರಿ ಬಾಡಿಗೆ ಶೇ. 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಟೆಕ್ ಕಾರಿಡಾರ್ ಹಾಗೂ ಐಟಿ ಪಾರ್ಕ್ ಸುತ್ತಮುತ್ತ ದುಬಾರಿ ಬಾಡಿಗೆ ಕೊಡುವ ಬದಲು, ಹೊಸ ಅಪಾರ್ಟ್‍ಮೆಂಟ್ (Apartment) ಖರೀದಿಯೇ ಬೆಸ್ಟ್ ಎಂದು ಟೆಕ್ಕಿಗಳು ಹೇಳುತ್ತಿದ್ದಾರೆ.
Advertisement
Advertisement
ಏರಿಕೆಯಾದ ಮನೆ ಬಾಡಿಗೆಯ ವಿವರ: 1 ಬಿಹೆಚ್‍ಕೆ ಮನೆ ಬಾಡಿಗೆಯ ದರವು 2020ರಲ್ಲಿ ಸುಮಾರು 6,000- 25,000 ರೂ. ಇತ್ತು. ಆದರೆ 2023ರ ವೇಳೆಗೆ 7,500- 31,000 ಆಗಿದೆ. ಅದೇ ರೀತಿ 2 ಬಿಹೆಚ್‍ಕೆ ಮನೆಗಳ ಬಾಡಿಗೆಯು 2020ರಲ್ಲಿ 7,000 – 50,000 ರೂ. ವರೆಗೆ ಇದ್ದರೇ, 2023ರ ವೇಳೆಗೆ 8,000- 58,000 ರೂ. ಹೆಚ್ಚಾಗಿದೆ. ಜೊತೆಗೆ 3 ಬಿಹೆಚ್‍ಕೆ ಮನೆ ಬಾಡಿಗೆಯು 2020ರಲ್ಲಿ 10,000- 85,000 ರೂ. ಇದ್ದರೇ, 2023ರ ವೇಳೆಗೆ 12,000 – 1 ಲಕ್ಷ ರೂ. ಗಳವರೆಗೆ ಏರಿಕೆ ಆಗಿದೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ಇಂದು 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ಅರ್ಜಿ ವಿಚಾರಣೆ
Advertisement
Advertisement
ಕೆಲವು ಐಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಶೇ. 30ರಷ್ಟು ಬಾಡಿಕೆ ಏರಿಕೆಯಾಗಿದೆ. ಈ ವರ್ಷ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಬನ್ನೇರುಘಟ್ಟ ರಸ್ತೆ, ಐಟಿಪಿಎಲ್, ಸರ್ಜಾಪುರ, ಸಿವಿ ರಾಮನ್ ನಗರ, ಮಾರತಹಳ್ಳಿ, ಕೊಡಿಗೇಹಳ್ಳಿ, ಎಚ್‍ಎಸ್‍ಆರ್ ಲೇಔಟ್, ದೊಮ್ಮಲೂರಿನಲ್ಲಿ ಏರಿಕೆಯಾಗಿದೆ. ಎ-ಗ್ರೇಡ್ ಅಪಾರ್ಟ್‍ಮೆಂಟ್‍ಗಳಲ್ಲಿ 2 ಬಿಹೆಚ್‍ಕೆ 40,000 ರೂ. ಬಾಡಿಗೆ ಇದೆ. ದೊಮ್ಮಲೂರಿನಲ್ಲಿ 2020ರಲ್ಲಿ 2 ಬಿಹೆಚ್‍ಕೆ ಅಪಾರ್ಟ್‍ಮೆಂಟ್ ಬಾಡಿಗೆ 15 ರಿಂದ 20 ಸಾವಿರ ರೂ. ಇತ್ತು. ಆದರೆ ಇದೀಗ 2 ಬಿಹೆಚ್‍ಕೆ ಅಪಾರ್ಟ್‍ಮೆಂಟ್ ಬಾಡಿಗೆ 30,000 ರೂ. ಆಗಿದೆ. ಕೊಡಿಗೆಹಳ್ಳಿ ಸುತ್ತಮುತ್ತ 2020ರಲ್ಲಿ ತಿಂಗಳಿಗೆ 25,000 ರೂ. ಬಾಡಿಗೆ ಇತ್ತು. ಕೊಡಿಗೆಹಳ್ಳಿ ಸುತ್ತಮುತ್ತ ಈಗ 50,000 ರೂ. ಬಾಡಿಗೆ ದರ ಏರಿಕೆ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ