ಬೆಂಗಳೂರು: ಸ್ಯಾಂಡಲ್‍ವುಡ್‍ನ ಹೈವೊಲ್ಟೇಜ್ ಸಿನಿಮಾ ಪೈಲ್ವಾನ್ ನಾಳೆ ಅದ್ಧೂರಿಯಾಗಿ ದೇಶಾದ್ಯಂತ ರಿಲೀಸ್ ಆಗುತ್ತಿದೆ. ಆದರೆ ಸಿನಿಮಾಗೆ ಸೆನ್ಸಾರ್ ಮಂಡಳಿ ಸೆನ್ಸಾರ್ ನೀಡಿಲ್ಲ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ತೆರೆ ಎಳೆದಿರುವ ನಿರ್ದೇಶಕ ಕೃಷ್ಣ ಸೆನ್ಸಾರ್ ಸಿಕ್ಕಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಪೈಲ್ವಾನ್ ಚಿತ್ರ ಪ್ಯಾನ್ ಇಂಡಿಯಾ ಬ್ಯಾನರ್ ಆಡಿಯಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಎಲ್ಲವೂ ಸರಿಯಾಗಿದೆ ಅನ್ನುವಾಗಲೇ ಕೊನೆಯ ಕ್ಷಣದಲ್ಲಿ ಕನ್ನಡ ಚಿತ್ರತಂಡಕ್ಕೆ ಆತಂಕ ಶುರುವಾಗಿದೆ. ಸೆನ್ಸಾರ್ ಮಂಡಳಿಯವರು ಹಿಂದಿ ಚಿತ್ರಕ್ಕೆ ಇನ್ನು ಸೆನ್ಸಾರ್ ನೀಡಿಲ್ಲ ಎಂಬ ಗಾಳಿ ಸುದ್ದಿ ಗಾಂಧಿನಗರದಲ್ಲಿ ಹರಡಿತ್ತು. ಈಗ ಈ ಗಾಸಿಪ್‍ಗೆ ಕೃಷ್ಣ ಟ್ವೀಟ್ ಮಾಡುವ ಮೂಲಕ ತೆರೆ ಎಳೆದಿದ್ದಾರೆ.
Advertisement
This to people who wanted clarity on Hindi censor certificate pic.twitter.com/cFpbR2m8Tp
— ಕೃಷ್ಣ / Krishna (@krisshdop) September 11, 2019
Advertisement
ಬಿಗ್ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದು, ಸದ್ಯ ಇಂದು ಸೆನ್ಸಾರ್ ಸಾಧ್ಯವಾಗದಿದ್ದರೆ ಹಿಂದಿ ವರ್ಷನ್ ಒಂದು ದಿನ ತಡವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಕೃಷ್ಣ ಸೆನ್ಸಾರ್ ಸಿಕಿದೆ ಸೆನ್ಸಾರ್ ಮಂಡಳಿ ಸೆನ್ಸಾರ್ ಕಾಪಿ ಸಹ ನೀಡಿದ್ದಾರೆ. ಸೆನ್ಸಾರ್ ಆಗಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸದಂತೆ ಮನವಿ ಮಾಡಿಕೊಂಡಿದ್ದಾರೆ.
Advertisement
ಈ ಚಿತ್ರವನ್ನು ಎಸ್ ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.
Advertisement
ಒಟ್ಟು ಐದು ಬಾಷೆಯಲ್ಲಿ ಪೈಲ್ವಾನ್ ಚಿತ್ರ ರೆಡಿಯಾಗಿದ್ದು, ಕರ್ನಾಟಕದಲ್ಲಿ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.