Connect with us

Bengaluru Rural

ಕೇಂದ್ರ ವಲಯ ಪೊಲೀಸರ ಭರ್ಜರಿ ಕಾರ್ಯಾಚರಣೆ – 3,600 ಕೆಜಿ ಮಾದಕ ವಸ್ತುಗಳ ನಾಶ

Published

on

Share this

ನೆಲಮಂಗಲ(ಬೆಂಗಳೂರು): ಕೇಂದ್ರ ವಲಯ ವಿಭಾಗದ ಐದು ಜಿಲ್ಲೆಯ ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯನ್ನು ಬೆಂಗಳೂರು ಹೊರವಲಯ ದಾಬಸ್ ಪೇಟೆಯಲ್ಲಿರುವ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಲಿ.ನಲ್ಲಿ ಮಾದಕ ದ್ರವ್ಯ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.

ಈ ಹಿನ್ನೆಲೆ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು. ಬೆಂಗಳೂರು ಜಿಲ್ಲೆ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ಕೆಜಿಎಪ್ ಜಿಲ್ಲೆಗಳ ವ್ಯಾಪ್ತಿಗೆ ಬರುವ ಮಾದಕ ವಸ್ತುಗಳ ನಾಶವನ್ನು ಮಾಡಲಾಯಿತು. ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಕೇಂದ್ರ ವಿಭಾಗದ 5 ಜಿಲ್ಲೆಗಳಿಂದ ಮಾದಕ ವಸ್ತುಗಳ ವಿಲೇವಾರಿಯನ್ನ ಮಾಡಲಾಯಿತು. ಸುಮಾರು 308ಕ್ಕೂ ಹೆಚ್ಚು ಪ್ರಕರಣಗಳು ಸೇರಿದಂತೆ 3,600 ಕೆಜಿ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಎಸ್.ಪಿ. ಡಾ.ಕೋನ ವಂಶಿಕೃಷ್ಣ, ಕೋಲಾರ ಎಸ್.ಪಿ. ಡಿ.ಕಿಶೋರ್ ಬಾಬು, ಚಿಕ್ಕಬಳ್ಳಾಪುರ ಜಿ.ಕೆ.ಮಿಥುನ್ ಕುಮಾರ್, ಕೆಜಿಎಫ್ ಇಲಕ್ಕಿಯಾ ಕರುಣಾಗರನ್, ರಾಮನಗರ ಗಿರೀಶ್ ಕುಮಾರ್, ರೈಲ್ವೆ ಇಲಾಖೆಯ ಸಿರಿ ಗೌರಿ.ಡಿ.ಆರ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಈ ವೇಳೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅಧಿಕಾರಿಗಳಿಗೆ ಇದರ ಬಗ್ಗೆ ಜಾಗೃತಿ ಹಾಗೂ ಪ್ರಮಾಣ ವಚನ ಭೋದಿಸಿ ಇದರಿಂದ ಆಗುವ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಿದರು.

Click to comment

Leave a Reply

Your email address will not be published. Required fields are marked *

Advertisement