Bengaluru CityKarnatakaLatestMain Post

ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

ಬೆಂಗಳೂರು:ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ವಾರ್ಷಿಕವಾಗಿ ವಿಶ್ವದಲ್ಲೇ ಅತಿ ಕಡಿಮೆ ಸಂಬಳವನ್ನು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್‍ಗಳು ಪಡೆಯುತ್ತಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

2017ರ ಜಾಗತಿಕ ಸ್ಟಾರ್ಟ್‌ಅಪ್‌ ಎಕೋಸಿಸ್ಟಮ್ ವರದಿಯನ್ನು  startupgenome.com ಬಿಡುಗಡೆ ಮಾಡಿದ್ದು ಟಾಪ್ 20 ನಗರಗಳ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ಬೆಂಗಳೂರಿನ ಸಂಸ್ಥೆಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್‍ಗಳು ವಾರ್ಷಿಕ 8600 ಡಾಲರ್(ಅಂದಾಜು 5.6 ಲಕ್ಷ) ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ಕ್ಯಾಲಿಫೋರ್ನಿಯಾದ  ಸಿಲಿಕಾನ್ ವ್ಯಾಲಿಯಲ್ಲಿ ಅತಿ ಹೆಚ್ಚು ಸಂಬಳ ಸಿಗುತ್ತಿದ್ದು, ಅಲ್ಲಿ 1,12,000 ಡಾಲರ್( ಅಂದಾಜು 72.9 ಲಕ್ಷ ರೂ.) ಸಂಬಳವನ್ನು ಟೆಕ್ಕಿಗಳು ಪಡೆಯುತ್ತಿದ್ದಾರೆ. ಬೆಂಗಳೂರಿನ ಸಂಬಳಕ್ಕೆ ಹೋಲಿಸಿದರೆ 13 ಪಟ್ಟು ಹೆಚ್ಚು ಸಂಬಳ ಇಲ್ಲಿ ಉದ್ಯೋಗ ಮಾಡುತ್ತಿರುವ ಟೆಕ್ಕಿಗಳಿಗೆ ಸಿಗುತ್ತಿದೆ.

ಬೆಂಗಳೂರಿನಲ್ಲಿ ಕಡಿಮೆ ಸಂಬಳಕ್ಕೆ ಸಾಫ್ಟ್ ವೇರ್ ಎಂಜಿನಿಯರ್‍ಗಳು ಸಿಗುವ ಕಾರಣ ಇಲ್ಲಿ ಬಹುತೇಕ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಮಾರುಕಟ್ಟೆ ವ್ಯಾಪ್ತಿ, ಪ್ರತಿಭೆ, ಸ್ಟಾರ್ಟ್‌ಅಪ್‌ ಅನುಭವ, ಕಾರ್ಯನಿರ್ವಹಣೆ, ಬಂಡವಾಳ ಆಧಾರದ ಮೇಲೆ ಈ ಸ್ಟಾರ್ಟ್ ಅಪ್ ವರದಿಯನ್ನು ತಯಾರಿಸಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಅಂದಾಜು 1,800 ರಿಂದ 2,300 ಸ್ಟಾರ್ಟ್ ಅಪ್‍ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

ಬೆಂಗಳೂರಿನ ವರದಿ

ಅಧ್ಯಯನ ವರದಿಯ ಸಂಪೂರ್ಣ ಕಾಪಿಯನ್ನು ಓದಲು ಕ್ಲಿಕ್ ಮಾಡಿ: startupgenome.com

 

Leave a Reply

Your email address will not be published. Required fields are marked *

Back to top button