BellaryDistrictsKarnatakaLatestMain Post

ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ!

Advertisements

ಬಳ್ಳಾರಿ: ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಹೀಗಾಗಿ ಇಲ್ಲೊಬ್ಬ ಅಭಿಯಾನಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಬರೋಬ್ಬರಿ 400 ಕೀಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.

ಹೌದು. ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ.ಚಂದ್ರಶೇಖರ್ ಬಳ್ಳಾರಿಯಿಂದ ಹೈದರಾಬಾದ್ ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ. ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ್ ಇಂದು ಹೈದರಾಬಾದ್ ನ ಶಾದ್ ನಗರ ತಲುಪಿದ್ದಾರೆ. ಇದನ್ನೂ ಓದಿ: ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

ಸಂಜೆ ಪವನ್ ಕಲ್ಯಾಣ್ ಹಾಗೂ ರಾಮ್ ಚರಣ್‍ರನ್ನ ಭೇಟಿಯಾಗಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪವನ್ ಕಲ್ಯಾಣ್ ರನ್ನ ಭೇಟಿಯಾಗಲು ಪ್ರಯತ್ನಿಸಿದರೂ ಚಂದ್ರಶೇಖರ್‍ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಳ್ಳಾರಿಯಿಂದ ಹೈದರಾಬಾದ್ ವರೆಗೂ ಪಾದಯಾತ್ರೆ ಮೂಲಕ ತೆರಳಿ ನೆಚ್ಚಿನ ನಟನನ್ನ ಭೇಟಿಯಾಗುತ್ತಿರುವುದು ವಿಶೇಷವಾಗಿದೆ.

Leave a Reply

Your email address will not be published.

Back to top button