ಬಳ್ಳಾರಿ: ಹೊಸಪೇಟೆಯನ್ನು ಜಿಲ್ಲೆ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂಗ್, ಎರಡು ವಿಶೇಷ ವಿಮಾನದ ಮೂಲಕ ನಿಯೋಗವನ್ನು ಬೆಂಗಳೂರಿಗೆ ಕರೆ ತರಲಿದ್ದಾರೆ.
ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ಜಿಲ್ಲೆ ಮಾಡಲು ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹಾಕಲು ಆನಂದ್ ಸಿಂಗ್ ಸಿದ್ಧತೆ ನಡೆಸುತ್ತಿದ್ದಾರೆ. ಹೊಸಪೇಟೆ ವ್ಯಾಪ್ತಿಯ ಸ್ವಾಮೀಜಿ, ಸಂಘ ಸಂಸ್ಥೆ, ಮುಖಂಡರನ್ನು ಎಂಎಲ್‍ಸಿಗಳನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಿದ್ದಾರೆ.
Advertisement
Advertisement
ಎರಡು ವಿಶೇಷ ವಿಮಾನಗಳಲ್ಲಿ ಹೊರಟಿರುವ ನಿಯೋಗದಲ್ಲಿ ಉಜ್ಜೈನಿ ಶ್ರೀ, ಸಂಗನ ಬಸವ ಶ್ರೀಗಳು ಸೇರಿದಂತೆ ಮಾಜಿ ಶಾಸಕ ಸಿರಾಜ್ ಶೇಖ್, ನೇಮಿರಾಜ ನಾಯ್ಕ ಮತ್ತು ಕಾಂಗ್ರೆಸ್ ಎಂಎಲ್‍ಸಿ ಅಲ್ಲಂ ವೀರಭದ್ರಪ್ಪ ಮತ್ತು ಕೆ.ಸಿ. ಕೊಂಡಯ್ಯ ಇರಲಿದ್ದಾರೆ. ಈ ನಿಯೋಗವು ಇಂದು ಹತ್ತು ಗಂಟೆಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೊಸಪೇಟೆಯನ್ನು ಜಿಲ್ಲೆ ಮಾಡಲೇಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದೆ ಎನ್ನಲಾಗಿದೆ.