ಬೆಳಗಾವಿ: ಸುವರ್ಣಸೌಧದ(Suvarna Soudha) ವಿಧಾನಸಭೆ ಸಭಾಂಗಣದ ಒಳಗಡೆ ಸಾವರ್ಕರ್(Savarkar) ಸೇರಿ 7 ಮಂದಿಯ ಫೋಟೋವನ್ನು ಅನಾವರಣ ಮಾಡಲಾಗಿದೆ.
ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಲಾಲ್ ಬಹಾದ್ದೂರ್ ಶಾಸ್ತ್ರೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಸವಣ್ಣ, ಸ್ವಾಮಿ ವಿವೇಕಾನಂದ, ವಿ ಡಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ.
Advertisement
Advertisement
ಮಾಧ್ಯಮಗಳನ್ನ ನಿರ್ಬಂಧ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸ್ಪೀಕರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಪೀಕರ್ ಕುಳಿತುಕೊಳ್ಳುವ ಆಸನದ ಮೇಲೆ ಬಸವಣ್ಣನ ಫೋಟೋ ಹಾಕಲಾಗಿದೆ.
Advertisement
ಸಿದ್ದರಾಮಯ್ಯ ಕಿಡಿ:
ಸ್ಪೀಕರ್ ಕಚೇರಿಯಿಂದ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನ್ ನಾಯಕರ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕುವುದು ಗೊತ್ತಾಯಿತು.