Bengaluru CityDistrictsKarnatakaLatestMain Post

ಬೆಂಗಳೂರಿನಲ್ಲಿ ಮತ್ತೆ ಕೇಳಲಿದೆ ಜೆಸಿಬಿ ಸದ್ದು – ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಆರ್ಭಟ ಆರಂಭವಾಗಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿರುವ ಮನೆಗಳನ್ನು ಕೆಡವಿ ಎಂದು ಆದೇಶ ನೀಡಿದ ಬೆನ್ನಲ್ಲೇ ಶೀಘ್ರವೇ ನಗರದಲ್ಲಿ ಒತ್ತುವರಿ ಕಾರ್ಯಾಚರಣೆ ಆರಂಭವಗಲಿದೆ.

ಹೌದು. ಮಳೆ ಬಂದರೆ ಬೆಂಗಳೂರಿನ ಕೆಲ ಪ್ರದೇಶಗಳು ಮುಳುಗಡೆಯಾಗುತ್ತಿದೆ. ರಾಜಕಾಲುವೆ ಹರಿಯುವ ಜಾಗವನ್ನು ಒತ್ತುವರಿ ಮಾಡಿದ ಪರಿಣಾಮ ನೀರು ರಸ್ತೆಯಲ್ಲೇ ಹರಿದು ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಹಿಂದೆ ನಾನಾ ಒತ್ತಡಗಳಿಂದ ಸ್ಥಗಿತಗೊಂಡಿದ್ದ ರಾಜಾಕಾಲುವೆ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ನಡೆಸಿರುವ ಸಮೀಕ್ಷೆ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವ ಮನೆ, ಕಟ್ಟಡಗಳನ್ನು ಕೆಡವಲು ಸಜ್ಜಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆಗಳಲ್ಲಿ ಒಟ್ಟು 1,953 ಒತ್ತುವರಿ ಪ್ರಕರಣ ಪತ್ತೆಯಾಗಿದ್ದು, ಗುರುತಿಸಲ್ಪಟ್ಟ ರಾಜಕಾಲುವೆಯ 802 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದಂತೆ 1,153 ರಾಜಕಾಲುವೆ ಒತ್ತುವರಿ ತೆರವಿಗೆ ಚಾಲನೆ ನೀಡಲು ಬಿಬಿಎಂಪಿ ಸಜ್ಜಾಗಿದೆ.

ವಾಸ್ತವವಾಗಿ ಸುಮಾರು 14,000ಕ್ಕೂ ಹೆಚ್ಚು ಒತ್ತುವರಿ ಪ್ರಕರಣಗಳಿರುವುದಾಗಿ ಅಂದಾಜಿಸಲಾಗಿದೆ. ಉಳಿದ ಒತ್ತುವರಿ ಪ್ರಕರಣಗಳ ಸಮೀಕ್ಷೆಗೂ ಚಾಲನೆ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 857 ಕಿಮೀ ಉದ್ದದ ರಾಜಾಕಾಲುವೆ ಇದೆ. ಈ ಪೈಕಿ, ಸುಮಾರು 480 ಕಿ.ಮೀ. ಉದ್ದದ ರಾಜಕಾಲುವೆ ಒತ್ತುವರಿಯಾಗಿದೆ.

ಸುಮಾರು 1500 ಎಕರೆ ವಿಸ್ತೀರ್ಣದ ರಾಜಕಾಲುವೆಗಳ ಬಫರ್ ಝೋನ್ ಪ್ರದೇಶವನ್ನು ಪ್ರತಿಷ್ಠಿತ ಬಿಲ್ಡರ್‍ಗಳು ಹಾಗೂ ಟೆಕ್‍ಪಾರ್ಕ್‍ಗಳ ಮಾಲೀಕರು, ಕಾರ್ಖಾನೆಗಳ ಮಾಲೀಕರು ಮತ್ತು ಮಧ್ಯಮ/ಸಣ್ಣ ಮನೆಗಳ ಮಾಲೀಕರು ಕಬಳಿಸಿದ್ದಾರೆ. ಬಫರ್ ಝೋನ್‍ನಲ್ಲಿ 1500 ಎಕರೆ ಭೂಮಿ ಮೌಲ್ಯದ 1 ಲಕ್ಷ 20 ಸಾವಿರ ಕೋಟಿಗೂ ಹೆಚ್ಚು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಬಫರ್ ಝೋನ್ ಒತ್ತುವರಿ ತೆರವಿಗೂ ಬಿಬಿಎಂಪಿ ಸಮೀಕ್ಷೆ ನಡೆಸಿದ್ದು, ತೆರವಿಗೆ ಸಿದ್ಧತೆ ಮಾಡಿಕೊಂಡಿದ್ದು ಸದ್ಯದಲ್ಲೇ ಚಾಲನೆ ನೀಡಲಿದೆ. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?

ನೂರಾರು ಎಕರೆ ರಾಜಕಾಲುವೆ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿದ್ದ ಮನೆಗಳನ್ನು ಈಗಾಗಲೇ ಬಿಬಿಎಂಪಿ ನೆಲಸಮ ಮಾಡಿದೆ. ಬೊಮ್ಮಸಂದ್ರ ಹಾಗೂ ಅವನಿಶೃಂಗೇರಿ ಬಡಾವಣೆಗಳಲ್ಲಿ ಬಡವರ ಮನೆಗಳನ್ನು ನೆಲಸಮಮಾಡಿದೆ. ಆದರೆ ದೊಡ್ಡವರು ಮನೆಗಳು ಒತ್ತುವರಿ ಲಿಸ್ಟ್‍ಗೆ ಬಂದಾಗ ನೋಟಿಸ್ ನೀಡಿ ಬಿಬಿಎಂಪಿ ಸುಮ್ಮನಾಗಿತ್ತು. ಮಹಾದೇವಪುರ, ಯಲಹಂಕ ವಲಯದಲ್ಲಿ ರಾಜಕಾಲುವೆ ಜಾಗಗಳನ್ನು ಭೂಕಳ್ಳರು ಕಬಳಿಸಿದ್ದಾರೆ. ಪೂರ್ವ ವಲಯದ ಹಾಗೂ ದಾರಹಳ್ಳಿ ವಲಯಗಳಲ್ಲಿಯೂ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ.

ಯಾವ ವಲಯದಲ್ಲಿ ಎಷ್ಟು ಒತ್ತುವರಿ?

Leave a Reply

Your email address will not be published.

Back to top button