BBK 13: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಫ್ಲೈಟ್ ಥೀಮ್‌ನಲ್ಲಿ (Bigg Boss Season 13) ಮಿಂಚುತ್ತಿರೋ ದೊಡ್ಮನೆಯಲ್ಲಿ ದಿನಾಲೂ ವಿಭಿನ್ನ ಟಾಸ್ಕ್‌ಗಳ ಮೂಲಕ ಕಂಟೆಸ್ಟಂಟ್‌ಗಳು ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ.
ಬಿಗ್‌ಬಾಸ್ ಅಸಲಿ ಆಟ ಶುರುವಾಗಿ ಮೂರು ದಿನವಾದ್ರೂ ಎಲ್ಲರಿಗೂ ಮನೆಯೊಳಗೆ ಇನ್ನೂ ಎಂಟ್ರಿ ಸಿಕ್ಕಿಲ್ಲ. 8 ಜನ ಮಾತ್ರ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಉಳಿದವರು ಇನ್ನೂ ಫ್ಲೈಟ್‌ವಾಸದಲ್ಲಿದ್ದಾರೆ.
ಇನ್ನು ಬಿಗ್‌ಬಾಸ್ ಹೊಸ ಪ್ರೋಮೋದಲ್ಲಿ ಟ್ರೆಜರ್ ಟಾಸ್ಕ್‌ನಲ್ಲಿ ವಿನ್ ಆಗಿರುವ ಗಗನ್ (Gagan) ಅವರನ್ನು ಬಿಗ್‌ಬಾಗ್ ಪ್ರಶ್ನೆ ಕೇಳುತ್ತಾರೆ. ಇನ್ನೂ ಫ್ಲೈಟ್ ಪ್ರಯಾಣದಲ್ಲಿರುವ ಯಾವ ವ್ಯಕ್ತಿ ಮನೆಯೊಳಗೆ ಬರಕೂಡದು.. ಅನರ್ಹರ ಹೆಸರನ್ನು ತಿಳಿಸಿ ಎಂದು ಹೇಳುತ್ತಾರೆ.
ಬಿಗ್‌ಬಾಸ್ ಪ್ರಶ್ನೆಗೆ ಉತ್ತರಿಸಿದ ಗಗನ್ ಧನುಷ್ ಅವರ ಹೆಸರನ್ನು ಹೇಳುತ್ತಾರೆ. ಮಾತಿನಲ್ಲಿ ಮರ್ಯಾದೆ ಇರ್ಬೇಕು. ಅವರಿನ್ನು ಮನೆಯೊಳಗೆ ಬರೋದಕ್ಕೆ ಸಮಯ ಆಗಬಹುದು ಎಂದು ಹೇಳುತ್ತಾರೆ. ಗಗನ್ ಮಾತಿಗೆ ಟ್ರಿಗರ್ ಆದ ಧನುಷ್, ಅವರ ಉತ್ತರವನ್ನು ನಾನು ಒಪ್ಪಲ್ಲ ಎಂದು ಸಿಟ್ಟಾಗಿ ವಾದ ಮಾಡುತ್ತಾರೆ. ಗಗನ್ – ಧನುಷ್ ನಡುವೆ ಮಾತಿನ ಚಕಾಮಕಿ ನಡೆಯುತ್ತದೆ.
ಈ ಮಧ್ಯೆ ಧನುಷ್, ನಿಮ್ಮ ಮಾತನ್ನೆಲ್ಲ ಸುಮ್ಮನೆ ಕೈಕಟ್ಟಿ ಕೇಳಬೇಕಾ? ಇಲ್ಲಿ ಕಾಮನ್‌ಮ್ಯಾನ್ ಅಂತಾ ಪರ್ಸನಲ್ ಟಾರ್ಗೆಟ್ ಮಾಡ್ತಿದ್ದೀರಾ.. ಇಡೀ ಕರ್ನಾಟಕ ಶೋ ನೋಡ್ತಾ ಇದೆ.. ಬೇಕು ಅಂತಲೇ ನನ್ನ ಹೆಸರನ್ನ ತಗೊಂಡಿದಿರಾ ಎಂದೆಲ್ಲಾ ಕೂಗಾಡುತ್ತಾರೆ. ಇವರಿಬ್ಬರ ಜಗಳದ ನಡುವೆ ಮಂಜುನಾಥ್ ʻಬಿಗ್‌ಬಾಸ್ ಸೆಲೆಬ್ರಿಟಿ vs ಕಾಮನ್ ಮ್ಯಾನ್ ನಡಿತಿದೆʼ ಎಂದು ಧನುಷ್ ಮಾತಿಗೆ ಮಣೆ ಹಾಕಿದ್ದಾರೆ.ಇದನ್ನೂ ಓದಿ: ಸೋತು ಮತ್ತೆ ಫ್ಲೈಟ್‌ಗೆ ಮರಳಿದ ಆಸಿಯಾ
ದೊಡ್ಮನೆಯ ಟಾಸ್ಕ್‌ಗಳಲ್ಲಿ ಕಂಟೆಸ್ಟಂಟ್‌ಗಳು ಟ್ರಿಗರ್ ಆಗಿ ಜಗಳವಾಡೋದು ಸಹಜ. ಅದರಂತೆ ಶುರುವಿನಿಂದಲೇ ಸೆಲೆಬ್ರಿಟಿ vs ಕಾಮನ್‌ಮ್ಯಾನ್ ಹೆಸರಿನಲ್ಲಿ ಜಗಳ ಆಗಬಹುದು ಎಂದು ಜನ ಮೊದಲೇ ನಿರೀಕ್ಷೆ ಮಾಡಿದ್ದರು. ಆದರೆ, ಮೊದಲ ವಾರದಲ್ಲೇ ಈ ವಿಚಾರದ ಕುರಿತು ಕಂಟೆಸ್ಟೆಂಟ್‌ಗಳ ವಾರ್ ಶುರುವಾಗಿದೆ.ಇದನ್ನೂ ಓದಿ: ಮಗಳ 2ನೇ ವರ್ಷದ ಸಂಭ್ರಮದಲ್ಲಿ ಬೇಬಿ ಬಂಪ್ ಫೋಟೋಶೂಟ್ – ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪ್‌ವೀರ್
