ಬಿಗ್‌ಬಾಸ್ (Bigg Boss) ಈ ಸೀಸನ್‌ನ ಒಟ್ಟು 16 ಸ್ಪರ್ಧಿಗಳಲ್ಲಿ ಎಂಟು ಮಂದಿ ಮನೆಯೊಳಗೆ ಪ್ರವೇಶಿಸುವ ಅರ್ಹತೆ ಪಡೆದುಕೊಂಡಿದ್ರು. ಆದರೆ ಇದೀಗ ಒಂದೇ ದಿನಕ್ಕೆ ಆಸಿಯಾ ಫಿರ್ದೋಸ್ ವಾಪಸ್ ಫ್ಲೈಟ್‌ಗೆ ಹೋಗುವಂತಾಗಿದೆ.
ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಕೊಟ್ಟ ಮೊದಲ ಟಾಸ್ಟ್‌ನಲ್ಲಿ ಸ್ಪರ್ಧಿಗಳಿಂದ ತಪ್ಪು ಘೋಷಣೆಯಿಂದಾಗಿ ಆಸಿಯಾ ವಾಪಸ್ ಫ್ಲೈಟ್‌ಗೆ ಹೋಗುವ ಶಿಕ್ಷೆ ಪಡೆದುಕೊಂಡರು. ಜೊತೆಗೆ ಈ ವಾರ ನೇರವಾಗಿ ಡಿಪಾರ್ಚರ್ ಲಿಸ್ಟ್‌ಗೆ ಸೇರಿದ್ದಾರೆ.

ಮನೆಯಲ್ಲಿದ್ದ 8 ಸ್ಪರ್ಧಿಗಳಿಗೆ ಬಿಗ್‌ಬಾಸ್ ತಲಾ ಒಂದೊಂದು ಟ್ರೆಜರ್ ಬಾಕ್ಸ್ ನೀಡಿದ್ದರು. ಅದರಲ್ಲಿ ಓರ್ವ ಸ್ಪರ್ಧಿ ಬಾಕ್ಸ್‌ನಲ್ಲಿ ವಜ್ರವಿತ್ತು. ವಜ್ರವಿದ್ದ ಸ್ಪರ್ಧಿ ರಹಸ್ಯ ಕಾಪಾಡಿಕೊಂಡು ಬೇರೆಯ ಸ್ಪರ್ಧಿಗಳಿಗೆ ತಿಳಿಯದಂತೆ ಕೊನೆಯ ತನಕ ಉಳಿಸಿಕೊಂಡರೆ ಅವರು ವಿಐಪಿ ಅಧಿಕಾರ ಹಾಗೂ ಈ ವಾರ ಸೇಫ್ ಆಗುವ ಅವಕಾಶ ಹೊಂದಿದ್ದರು. ಅದರಂತೆ ವಜ್ರವಿರುವ ಬಾಕ್ಸ್ ಸ್ಪರ್ಧಿ ಗಗನ್ ಕೈಗೆ ಸೇರಿತ್ತು. ಬಳಿಕ ಗಗನ್ ಸ್ಟ್ರಾಟರ್ಜಿ ಉಪಯೋಗಿಸಿ ಉಳಿದ ಸ್ಪರ್ಧಿಗಳ ಮನವೊಲಿಸಿ ಆಸಿಯಾ ಬಳಿಯೇ ಇದೆ ಎಂದು ಹೇಳುವಂತೆ ಟಾರ್ಗೆಟ್ ಮಾಡುತ್ತಾರೆ.
ಹಲವರು ವೋಟ್ ಮಾಡುವ ಪ್ರಕಾರ, ಆಸಿಯಾ ಬಳಿ ವಜ್ರವಿದೆ ಎಂದು ತಪ್ಪು ಘೋಷಣೆ ಮಾಡಲಾಗುತ್ತೆ. ಆದರೆ ವಜ್ರ ಇದ್ದಿದ್ದು ಗಗನ್ ಬಳಿ. ಯಾರೂ ಗಗನ್ ಹೆಸರನ್ನು ತೆಗೆದುಕೊಂಡಿರುವುದಿಲ್ಲ. ತಪ್ಪು ಹೆಸರು ಘೋಷಣೆ ಆಗಿರೋ ಕಾಣರಕ್ಕೆ ಆಸಿಯಾ ಫಿರ್ದೋಸ್ ನೇರವಾಗಿ ನಾಮಿನೇಟ್ ಆಗಿದ್ದಲ್ಲದೇ ವಾಪಸ್ ಫ್ಲೈಟ್‌ಗೆ ಮರಳಬೇಕಾಗುತ್ತದೆ. ಗಗನ್ ಕಾರಣಕ್ಕೆ ನಾನು ಟಾರ್ಗೆಟ್ ಆದೆ ಎಂದು ಕೋಪಗೊಳ್ಳುವ ಆಸಿಯಾ ಗಗನ್‌ಗೆ ಚಾಲೆಂಜ್ ಮಾಡಿ, ತೀವ್ರ ದುಃಖದಿಂದ ವಾಪಸ್ ಫ್ಲೈಟ್ ಹತ್ತುತ್ತಾರೆ.
