Bengaluru CityCinemaLatestMain PostSouth cinema

ನಾಯಕಿ ಹನಿ ರೋಸ್ ಜೊತೆ ಬಾಲಯ್ಯ ಪಾರ್ಟಿ

`ಅಖಂಡ’ ಚಿತ್ರದ ಸಕ್ಸಸ್ ನಂತರ `ವೀರಸಿಂಹ ರೆಡ್ಡಿ’ (Veerasimha Reddy) ಸಕ್ಸಸ್ ಅಲೆಯಲ್ಲಿ ನಟ ಬಾಲಯ್ಯ ತೇಲುತ್ತಿದ್ದಾರೆ. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ. ನಟಿ ಹನಿ ರೋಸ್ (Honey Rose) ಜೊತೆ ತೆಗೆದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಟಾಲಿವುಡ್ (Tollywood) ಅಂಗಳದಲ್ಲಿ ಸದ್ಯ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರದ್ದೇ ಸದ್ದು ಸುದ್ದಿ. `ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಖಡಕ್ ಆಗಿ ಅಬ್ಬರಿಸಿದ್ದರು. ದುನಿಯಾ ವಿಜಯ್ ವಿಲನ್ ಆಗಿ ಟಕ್ಕರ್ ಕೊಟ್ಟಿದ್ದರು. ಜ.12ಕ್ಕೆ ಸಿನಿಮಾ ತೆರೆಗೆ ಅಬ್ಬರಿಸಿತ್ತು. ರಿಲೀಸ್ ಕೆಲವೇ ದಿನಕ್ಕೆ 124 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಿರುವಾಗ ಚಿತ್ರದ ನಾಯಕಿ ಹನಿ ರೋಸ್ ಜೊತೆ ಬಾಲಯ್ಯ (Balayya) ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

ಸದ್ಯ ಈ ಪಾರ್ಟಿಯಲ್ಲಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಕೈ ಬಳಸಿ ವಿಭಿನ್ನ ಶೈಲಿಯಲ್ಲಿ ಕುಡಿಯುತ್ತಿರುವ ಫೋಟೊವೊಂದು ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇನ್ನು ನಟಿ ಹನಿ ರೋಸ್ ಮೂಲತಃ ಮಲಯಾಳಂನವರಾಗಿದ್ದು, `ವೀರಸಿಂಹ ರೆಡ್ಡಿ’ ಮೂಲಕ ಟಾಲಿವುಡ್ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಹನಿ ರೋಸ್ ಬಾಲಕೃಷ್ಣ ಪತ್ನಿ ಮೀನಾಕ್ಷಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಸಕ್ಸಸ್ ಪಾರ್ಟಿಯಲ್ಲಿ ನೇರಳೆ ಬಣ್ಣದ ಗೌನ್ ಧರಿಸಿದ್ದ ನಟಿ ಹನಿ ರೋಸ್ ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದು, ಈ ಚಿತ್ರಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಅನಿಲ್ ರವಿಪುಡಿ (Anil Ravipudi) ನಿರ್ದೇಶಿಸಲಿರುವ ಬಾಲಕೃಷ್ಣ ನಟನೆಯ ಮುಂದಿನ ಚಿತ್ರಕ್ಕೂ ಸಹ ಹನಿ ರೋಸ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button