ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

ರಾಜಮೌಳಿ (Rajamouli) ಅವರೇ ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್ ತಗೆದುಕೊಂಡಿದ್ದೇನೆ ಹಾಗಾಗಿ ಸತ್ಯ ನುಡಿಯುತ್ತಿದ್ದೇನೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಒಂದು ಕ್ಷಣ ರಾಜಮೌಳಿ ಅಭಿಮಾನಿಗಳನ್ನು ದಂಗಾಗಿಸಿದ್ದರು.
ಈ ವಿಷಯವನ್ನು ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮೊದ ಮೊದಲು ಎಲ್ಲರೂ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದ್ದರು. ಆನಂತರ ಸರಣಿಯವಾಗಿ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ. ಹಾಗಾಗಿ ಇದು ತಮಾಷೆ ಮತ್ತು ರಾಜಮೌಳಿಯನ್ನು ಕಾಲು ಎಳೆಯುವ ತಂತ್ರ ಎಂದು ನಿಟ್ಟುಸಿರಿಟ್ಟಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ
ಸರಣಿಯ ಟ್ವೀಟ್ ನಲ್ಲಿ ರಾಜಮೌಳಿಯನ್ನು ಹೊಗಳಿರುವ ವರ್ಮಾ, ಅವರನ್ನು ದಾದಾ ಸಾಹೇಬ್ ಫಾಲ್ಕೆಗೆ ಹೋಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕರನ್ನೂ ದಾಟಿಕೊಂಡು ಮುಂದೆ ಹೋಗಿದ್ದೀರಿ ಎಂದಿದ್ದಾರೆ. ಈ ಸ್ಥಾನದಲ್ಲಿ ನೀವು ಇರುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಿಮ್ಮ ಕಿರುಬೆರಳನ್ನು ಒಂದು ಸಲ ಚೀಪಬೇಕು ಎಂದು ಯತ್ವಾತದ್ವಾ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾ.
ಇತ್ತೀಚೆಗಷ್ಟೇ ರಾಜಮೌಳಿ ಹಾಲಿವುಡ್ ನಿರ್ದೇಶಕರನ್ನು ಭೇಟಿ ಮಾಡಿದ್ದರು. ಅವರು ಆರ್.ಆರ್.ಆರ್ (RRR) ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಲ್ಲದೇ, ಈ ಸಿನಿಮಾದ ಹಾಡಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಬಂದಿತ್ತು. ಇದೀಗ ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲೂ ಕೂಡ ಆರ್.ಆರ್.ಆರ್ ಸಿನಿಮಾವಿದೆ. ಈ ಹಿನ್ನೆಲೆಯಲ್ಲಿ ವರ್ಮಾ ಮೆಚ್ಚುಗೆಯ ಮಾತುಗಳ ಮೂಲಕ ಅಭಿನಂದಿಸಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k