ನವದೆಹಲಿ: ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಭವಿಷ್ಯದಲ್ಲಿ INDIA ಒಕ್ಕೂಟವನ್ನು ಸೇರಬಹುದು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ(P Chidambaram) ಆಶಾವಾದ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿಜಯ್ ಅವರ ಟಿವಿಕೆ ಪಕ್ಷವನ್ನು ಕೂಡ ‘ಇಂಡಿಯಾ’ ಕೂಟಕ್ಕೆ ಸೇರಲು ಮನವೊಲಿಸಬೇಕು ಎಂಬುದು ನನ್ನ ಆಸೆ ಎಂದು ಹೇಳಿದ್ದಾರೆ.
ಸ್ಟಾಲಿನ್ (Stalin) ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆಯೇ ಹೊರತು ಇಲ್ಲಿಯವರೆಗೆ ಇಂಡಿಯಾ ಕೂಟದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಆದ್ದರಿಂದ ಅವರು ಮೈತ್ರಿಯಲ್ಲೇ ಉಳಿಯುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದಲ್ಲಿ ನಾವು ಪರಸ್ಪರ ಎದುರಾಳಿಗಳಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಕೂಟದಲ್ಲಿ ಜೊತೆಯಾಗಿರಬಹುದು. ಇದಕ್ಕೆ ಕೇರಳದ ಸಿಪಿಎಂ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಉದಾಹರಣೆಗಳಾಗಿವೆ ಎಂದರು. ಇದನ್ನೂ ಓದಿ: ಟಿವಿಕೆಗೆ ನೀಡಿದ್ದು ಬಾಹ್ಯ ಬೆಂಬಲ – ಡಿಎಂಕೆ ಮೈತ್ರಿಯಲ್ಲಿ ಮುಂದುವರಿಯಲಿದೆ ವಿಸಿಕೆ
ಸ್ಟಾಲಿನ್ ಆಕ್ರೋಶ
ಎಂಕೆ ಸ್ಟಾಲಿನ್ ಶನಿವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿಜಯ್ ಅವರನ್ನು ಬೆಂಬಲಿಸುವ ಮೊದಲು ಕಾಂಗ್ರೆಸ್ ತನ್ನೊಂದಿಗೆ ಸಮಾಲೋಚಿಸಲಿಲ್ಲ ಎಂದು ದೂರಿದ್ದರು.
ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್ ಶಾಸಕರು ಡಿಎಂಕೆ ಪ್ರದಾನ ಕಚೇರಿ ಅಣ್ಣಾ ಅರಿವಲಯಂಗೆ ಕೃತಜ್ಞತೆ ಸಲ್ಲಿಸಲು ಬರಲಿಲ್ಲ. ಆದರೆ ಕಮ್ಯುನಿಸ್ಟ್ ನಾಯಕರಾದ ಕಾಮ್ರೇಡ್ ಷಣ್ಮುಗಂ ಮತ್ತು ಕಾಮ್ರೇಡ್ ವೀರಪಾಂಡ್ಯನ್, ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕ ತಿರುಮಾವಲವನ್ ಅವರೊಂದಿಗೆ, ಡಿಎಂಕೆ ಜೊತೆ ಕೈಜೋಡಿಸುವುದನ್ನು ಮುಂದುವರಿಸುವುದಾಗಿ ಮತ್ತು ತಮಿಳುನಾಡಿನ ಹಕ್ಕುಗಳು ಮತ್ತು ಜನರ ಕಲ್ಯಾಣಕ್ಕಾಗಿ ಹೋರಾಡುವುದಾಗಿ ಘೋಷಿಸಿದ್ದಾರೆ ಎಂದು ಬರೆದಿದ್ದರು.
என் உயிரோடு கலந்திருக்கும் தலைவர் கலைஞரின் அன்பு உடன்பிறப்புகளுக்கும், என் உயிர்நிகர் தமிழ் மக்களுக்கும் என் அன்பு வணக்கம்.
தேர்தல் முடிவுகள் அறிவிக்கப்பட்ட பின்பு, நடக்கும் நிகழ்வுகளை நீங்கள் பார்க்கிறீர்கள். எந்தக் கட்சிக்கும் ஆட்சி அமைக்கும் பெரும்பான்மை கிடைக்காத வகையில்…
— M.K.Stalin – தமிழ்நாட்டை தலைகுனிய விடமாட்டேன் (@mkstalin) May 9, 2026
22 ಸಂಸದರನ್ನು ಹೊಂದಿರುವ ಡಿಎಂಕೆ INDIA ಮೈತ್ರಿಕೂಟದ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದುಕೊಂಡಿದೆ.

