Connect with us

Cinema

ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

Published

on

ವಿಜಯವಾಡ: ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ಇಂದು ದೇಶದಾದ್ಯಂತ ತೆರೆಕಂಡಿದೆ. ಬೆಂಗ್ಳೂರಿನಲ್ಲಿ ಗುರುವಾರದಂದೇ ಬಾಹುಬಲಿ-2 ಚಿತ್ರದ ವಿಶೇಷ ಪ್ರದರ್ಶನ ಮಾಡಲಾಗಿದ್ದು, ಟಿಕೆಟ್ ದರ 1200 ರೂ. ನಿಂದ 1600 ರೂ.ವರೆಗೆ ಇತ್ತು. ಆದ್ರೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಲಾಭದಾಯಕ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬಾಹುಬಲಿ-2 ಚಿತ್ರದ ಟಿಕೆಟ್‍ಗಳು 3500 ರಿಂದ 4 ಸಾವಿರ ರೂ.ಗೆ ಮಾರಾಟವಾಗಿವೆ.

ಇದನ್ನೂ ಓದಿ:ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

ಹೈದರಾಬಾದ್, ವಾರಂಗಲ್, ಕರೀಂನಗರ್, ಮೆಹಬೂಬ್‍ನಗರ್ ಹಾಗೂ ತೆಲಂಗಾಣದ ಇತರೆ ನಗರಗಳಲ್ಲಿ ಜನರು ಸುಡುಬಿಸಿಲಿನಲ್ಲೂ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದರು. ನಾವು ಇಂದಿನ 11.30ರ ಪ್ರದರ್ಶನಕ್ಕೆ ಎರಡು ಟಿಕೆಟ್‍ಗಳನ್ನು 3 ಸಾವಿರ ರೂಪಾಯಿಗೆ ಕೊಂಡುಕೊಂಡೆವು ಎಂದು ನಿಜಾಮಾಬಾದ್‍ನ ಪ್ರಭಾಸ್ ಅಭಿಮಾನಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

ಆಂಧ್ರಪ್ರದೇಶದಲ್ಲಿ ಬಾಹುಬಲಿ ಮೇನಿಯಾ ಎಷ್ಟಿದೆಯೆಂದರೆ ಕೆಲವು ಗ್ಯಾಸ್ ಏಜೆಂನ್ಸಿಗಳು ಹೊಸ ಗ್ಯಾಸ್ ಸಂಪರ್ಕ ಪಡೆಯುವವರಿಗೆ ಬಾಹುಬಲಿ-2 ಚಿತ್ರಕ್ಕೆ ಉಚಿತ ಟಿಕೆಟ್ ಆಫರ್ ಕೂಡ ನೀಡಿದ್ದಾರೆ. ಅಲ್ಲದೆ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಕೂಡ ಉಚಿತ ಟಿಕೆಟ್ ನೀಡಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಲ್ಪನಾ ಲೋಕಕ್ಕೆ ಹೊಸ ಭಾಷ್ಯ ಬರೆದ ಬಾಹುಬಲಿ-2 ಚಿತ್ರದ ಫಸ್ಟ್ ರಿಪೋರ್ಟ್ 

ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ 100 ರೂ. ಇದ್ದು, ಬಾಹುಬಲಿ ಚಿತ್ರದ ಟಿಕೆಟ್ ದರವನ್ನ 500 ರೂ.ಗೆ ಏರಿಸಲಾಗಿದೆ ಎಂದು ಇಲ್ಲಿನ ಚಿತ್ರಪ್ರೇಮಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ

Click to comment

Leave a Reply

Your email address will not be published. Required fields are marked *