Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ತಪ್ಪದ ಗ್ಯಾಸ್ ಪ್ರಾಬ್ಲಂ – ಬಂಕ್‌ಗಳ ಎದುರು ಆಟೋಗಳ ಸರತಿಸಾಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದಲ್ಲಿ ತಪ್ಪದ ಗ್ಯಾಸ್ ಪ್ರಾಬ್ಲಂ – ಬಂಕ್‌ಗಳ ಎದುರು ಆಟೋಗಳ ಸರತಿಸಾಲು

Bengaluru City

ರಾಜ್ಯದಲ್ಲಿ ತಪ್ಪದ ಗ್ಯಾಸ್ ಪ್ರಾಬ್ಲಂ – ಬಂಕ್‌ಗಳ ಎದುರು ಆಟೋಗಳ ಸರತಿಸಾಲು

Public TV
Last updated: April 4, 2026 3:55 pm
Public TV
Share
3 Min Read
Auto Gas Problem
SHARE

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧೆಡೆ ಆಟೋ ಗ್ಯಾಸ್ (Auto Gas) ಸಮಸ್ಯೆ ಮಿತಿಮೀರಿದೆ. ಯಾವುದೇ ಬಂಕ್‌ಗೆ ಹೋದರೂ ಗ್ಯಾಸ್ ಸಿಗದೇ ಚಾಲಕರು ಪರದಾಡುವಂತಾಗಿದೆ. ಬಂಕ್‌ಗಳಲ್ಲಿ ನೋ ಸ್ಟಾಕ್‌ಬೋರ್ಡ್ ಹಾಕಲಾಗಿದೆ.

ಕೋಲಾರದ ಹೊರವಲಯದ ಮೆಹಬೂಬ್ ಸರ್ವಿಸ್ ಸ್ಟೇಷನ್‌ನಲ್ಲಿ ಗ್ಯಾಸ್ ಖಾಲಿ ಆಗಿದೆ. ಕೋಲಾರ ಬಂಕ್‌ಗೆ ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ, ದೊಡ್ಡಬಳ್ಳಾಪುರ, ವಿಜಯಪುರದಿಂದ ಬಂದು ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದು, ಇಲ್ಲಿ ಸ್ಟಾಕ್ ಖಾಲಿ ಆಗಿದೆ. ಹೀಗಾಗಿ ಪ್ರತಿ ಆಟೋಗೆ 200 ರೂ.ಗೆ ಮಿತಿ ಹೇರಲಾಗಿದೆ. ಇದನ್ನೂ ಓದಿ: ತುಮಕೂರಲ್ಲಿ ಮಹಿಳಾ ಪಿಎಸ್‌ಐ ನಾಪತ್ತೆ – ಮಗಳಿಂದ ದೂರು ದಾಖಲು

ಇನ್ನು ರಾಯಚೂರಿನ ಆಟೋ ಚಾಲಕರು ಕೊಂಚ ನಿರಾಳರಾಗಿದ್ದಾರೆ. ಒಂದು ವಾರದಿಂದ ಬಂದ್ ಆಗಿದ್ದ 3 ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಶುಕ್ರವಾರ ರಾತ್ರಿಯಿಂದ ಆರಂಭವಾಗಿದೆ. ಆಟೋಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಂಕ್ ಮಾಲೀಕರು ಒಂದು ಆಟೋಗೆ 500 ರೂ. ಮಿತಿ ನಿಗದಿ ಮಾಡಿದ್ದಾರೆ. ಅಲ್ಲದೇ ಲೀಟರ್ ಗ್ಯಾಸ್‌ಗೆ 30 ರೂ. ಹೆಚ್ಚು ಮಾಡಿರುವುದಕ್ಕೆ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶ್ರೇಯಸ್‌ ಅಯ್ಯರ್‌ಗೆ 24 ಲಕ್ಷ ದಂಡ – ಪಂಜಾಬ್‌ ಕ್ಯಾಪ್ಟನ್‌ಗೆ ಕಾಡ್ತಿದೆ ಬ್ಯಾನ್‌ ಭೀತಿ

ಮಂಡ್ಯದಲ್ಲಿ ಎಲ್‌ಪಿಜಿ ಬಂಕ್‌ಗಳು ಬಂದ್ ಆಗಿವೆ. ಶುಕ್ರವಾರ ರಾತ್ರಿವರೆಗೆ ಮಂಡ್ಯದ ಎಲ್‌ಪಿಜಿ ಬಂಕ್‌ಗಳಲ್ಲಿ ಇದ್ದ ಸ್ಟಾಕ್ ಅನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಸ್ಟಾಕ್ ಖಾಲಿಯಾಗಿದ್ದು, ಸಪ್ಲೆ ಕೂಡ ಬಂದಿಲ್ಲ. ಹೀಗಾಗಿ ಮಂಡ್ಯ ನಗರದ ಎಲ್‌ಪಿಜಿ ಬಂಕ್‌ಗಳು ಬಂದ್ ಆಗಿವೆ. ನಮ್ಮ ಗೋಳನ್ನು ಕೇಳುವವರು ಯಾರು ಇಲ್ಲ, ಆಟೋ ಓಡಿಸಿದ್ರೆ ನಮ್ಮ ಹೊಟ್ಟೆ ತುಂಬುತ್ತಿತ್ತು. ಆದ್ರೆ ಇದೀಗ ನಾವು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ನಮ್ಮ ಸಮಸ್ಯೆಯನ್ನು ಬೇಗ ಬಗೆಹರಿಸಿ ಮೊದಲು ದೊರೆಯುತ್ತಿದ್ದ ಎಲ್‌ಪಿಜಿ ಬೆಲೆಯಲ್ಲಿ ನೀಡಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅರ್ಜುನ ಜನ್ಯ, ವೆಂಕಟೇಶ ಪ್ರಸಾದ್ ಸೇರಿ 6 ಗಣ್ಯರಿಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ಇನ್ನು ಚಿತ್ರದುರ್ಗ ನಗರದಲ್ಲಿನ ನಾಲ್ಕು ಗ್ಯಾಸ್ ಬಂಕ್‌ಗಳು ಬಂದ್ ಆಗಿದ್ದು, ಎಲ್‌ಪಿಜಿ ಗ್ಯಾಸ್ ಬೆಲೆ ಗಗನಕ್ಕೇರಿದೆ. ಯುದ್ಧ ಆರಂಭಕ್ಕೂ ಮುನ್ನ ಕೇವಲ 54 ರೂ. ಇದ್ದ ಎಲ್‌ಪಿಜಿ ದರ ದಿಢೀರ್ 90 ರೂ.ಗೆ ಏರಿಕೆಯಾಗಿದೆ. ಹೀಗಾಗಿ ದುಬಾರಿ ಬೆಲೆಗೆ ಗ್ಯಾಸ್ ಖರೀದಿಸಿ, 10 ರೂ. ಜಾಸ್ತಿ ಕೇಳಿದ್ರೆ ಪ್ರಯಾಣಿಕರು ಕೊಡಲ್ಲ. ನಮ್ಮೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ. ಇದರಿಂದಾಗಿ ನಮ್ಮ ಕುಟುಂಬ ನಿರ್ವಹಣೆ ತೀವ್ರ ಕಷ್ಟಕರವಾಗಿದೆ ಎಂದು ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: IPL ಟಿಕೆಟ್‌ಗಾಗಿ ಸ್ಪೀಕರ್ ಕಚೇರಿ ಮುಂದೆ ಶಾಸಕರ ಪಿಎಗಳ ಕ್ಯೂ

ಕಲಬುರಗಿಯಲ್ಲಿ ಹಲವೆಡೆ ಆಟೋ ಎಲ್‌ಪಿಜಿ ಗ್ಯಾಸ್ ಬಂಕ್ ಬಂದ್ ಆಗಿದ್ದು, ಜೊತೆಗೆ ದರ ಏರಿಕೆ ಮಾಡಲಾಗಿದೆ. ದರ ಏರಿಕೆ ಖಂಡಿಸಿ ಕಲಬುರಗಿ ನಗರದ ಎಸ್‌ವಿಪಿ ವೃತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಕೆಲವು ಆಟೋ ಗ್ಯಾಸ್ ಬಂಕ್ ಮಾಲೀಕರು ಹೆಚ್ಚಿನ ದರ ನೀಡಿದ್ರೆ ಮಾತ್ರ ಗ್ಯಾಸ್ ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮಧ್ಯಸ್ಥಿಕೆವಹಿಸಿ ಆಟೋ ಎಲ್‌ಪಿಜಿ ಗ್ಯಾಸ್ ಮಾಫಿಯಾಗೆ ಬ್ರೇಕ್ ಹಾಕಬೇಕು. ಇಲ್ಲವಾದರೆ ಸೋಮವಾರ ನಗರದಲ್ಲಿನ ಎಲ್ಲಾ ಆಟೋ ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ – 9 ವರ್ಷದ ಬಾಲಕಿ ಸಾವು

ಇನ್ನು ಹಾಸನದಲ್ಲೂ ಗ್ಯಾಸ್ ದರ ಏರಿಕೆ ಖಂಡಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ತಿಂಗಳ ಹಿಂದೆ 55 ಇದ್ದ ಗ್ಯಾಸ್ ದರ ಈಗ 100 ರೂ. ಆಗಿದೆ. ಸರ್ಕಾರಿ ಸ್ವಾಮ್ಯದ ಬಂಕ್‌ನಲ್ಲಿ ಸರಿಯಾಗಿ ಗ್ಯಾಸ್ ಸಿಗುತ್ತಿಲ್ಲ. ಖಾಸಗಿಯವರು ಪ್ರತೀ ದಿನ ಬೆಲೆ ಏರಿಕೆ ಮಾಡುತ್ತಿದ್ದಾರೆ. ಯುದ್ಧ ಶುರುವಾದ ಬಳಿಕ ಜೀವನವೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕದೀತಿದ್ದ 9 ಅಪ್ರಾಪ್ತರು ಸೇರಿ 13 ಮಂದಿ ಅರೆಸ್ಟ್ – ಕಳುವಾಗಿದ್ದ 75 ಹೈಎಂಡ್ ಮೊಬೈಲ್‌ಗಳು ಸೀಜ್‌

ಒಟ್ಟಾರೆ, ರಾಜ್ಯದ ವಿವಿಧೆಡೆ ಆಟೋ ಗ್ಯಾಸ್ ಸಮಸ್ಯೆ ಉಲ್ಬಣಗೊಂಡಿದ್ದು, ಎಲ್‌ಪಿಜಿಗಾಗಿ ಆಟೋ ಚಾಲಕರು ಪರದಾಡುವಂತಾಗಿದೆ. ಮತ್ತೊಂದೆಡೆ ಗ್ಯಾಸ್ ದರ ಏರಿಕೆ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.  ಇದನ್ನೂ ಓದಿ: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆರ್‌ಸಿಬಿ ಆಟಗಾರರು

TAGGED:Auto DriversAuto GasbengalurukarnatakaLPG Gas Bunkಆಟೋ ಗ್ಯಾಸ್‌ಆಟೋ ಚಾಲಕರುಎಲ್‌ಪಿಜಿ ಗ್ಯಾಸ್ ಬಂಕ್ಕರ್ನಾಟಕಬೆಂಗಳೂರು
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 1 7
Bengaluru City

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿ – ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

Public TV
By Public TV
15 minutes ago
IPL 2026 Riyan Parag Caught Vaping In Rajasthan Royals Dressing Room As Fresh Controversy
Cricket

ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Public TV
By Public TV
26 minutes ago
MC SUDHAKAR
Bengaluru City

ಹಿಜಬ್‌, ಜನಿವಾರದಿಂದ ಸಮಸ್ಯೆಗೊಳಗಾದ ಪರೀಕ್ಷಾರ್ಥಿಗಳಿಗೆ ಸಿಟಿಇ ಮರುಪರೀಕ್ಷೆ: ಎಂ.ಸಿ ಸುಧಾಕರ್‌

Public TV
By Public TV
51 minutes ago
SUPREME COURT
Latest

ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

Public TV
By Public TV
56 minutes ago
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
By Public TV
1 hour ago
grapes
Chikkaballapur

ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?