ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನ (Bangladesh) ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ಶ್ರೀಲಂಕಾ ವಿರುದ್ಧ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಲಿದೆ.
ಝೆಜಿಯಾಂಗ್ ಟೆಕ್ ವಿವಿ ಕ್ರೀಡಾಂಗಣದಲ್ಲಿಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಫೈನಲ್ ತಲುಪಿದೆ. ಇದನ್ನೂ ಓದಿ: ರೋಯಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ – ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಮಹಿಳೆಯರು
Advertisement
Advertisement
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 17.5 ಓವರ್‌ಗಳಲ್ಲಿ ಕೇವಲ 51 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತೀಯ ಮಹಿಳಾ ತಂಡ 8 ಓವರ್‌ಗಳಲ್ಲೇ 52 ರನ್ ಗಳಿಸಿ ಗೆಲುವು ಸಾಧಿಸಿತು.
Advertisement
ಮೊದಲು ಕ್ರೀಸ್‌ಗಿಳಿದ ಬಾಂಗ್ಲಾದೇಶ ತಂಡ ಟೀಂ ಇಂಡಿಯಾದ ಬಿಗಿ ಬೌಲಿಂಗ್ ಹಿಡಿತಕ್ಕೆ ತತ್ತರಿಸಿತು. ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 17 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ, ಟಿಟಾಸ್ ಸಾಧು, ಅಮನ್‌ಜ್ಯೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್ ಹಾಗೂ ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ
Advertisement
ಟೀಂ ಇಂಡಿಯಾ ಪರ ಬ್ಯಾಂಟಿಂಗ್‌ನಲ್ಲಿ ಜೆಮಿಮಾ ರೊಡ್ರಿಗ್ಸ್ 15 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 20 ರನ್ ಗಳಿಸಿದ್ರೆ, ಶಫಾಲಿ ವರ್ಮಾ 21 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 17 ರನ್‌ಗಳಿಸಿದರು. ನಾಯಕಿ ಸ್ಮೃತಿ ಮಂಧಾನ 7 ರನ್‌ಗಳಿಗೆ ವಿಕೆಟ್ ಕೈಚೆಲ್ಲಿದರು.
Web Stories