ನೆಲಮಂಗಲ: ಪ್ರಿಯಕರ ಫೋನ್ ಕರೆ ಸ್ವೀಕರಿಸದ್ದಕ್ಕೆ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಬಳಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮೂಲದ ರಿಜೀಯಾ ಕಾಟೂನ್ (19)ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ತಾಲೂಕಿನ ಟಿ.ಬೇಗೂರು ಬಳಿಯ ಅಂಬಿಕಾ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೋಮಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಈಕೆ ಅದೇ ಕಾಲೇಜಿನ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಭಾನುವಾರ ಫೋನ್ ಕರೆಯನ್ನು ರಿಸೀವ್ ಮಾಡದಿದ್ದಕ್ಕೆ ಮನನೊಂದು ಪ್ರಿಯತಮನ ಜೊತೆ ತಂಗಲು ಬಾಡಿಗೆ ಪಡೆದಿದ್ದ ತೋಟದ ಮನೆಯಲ್ಲಿ ರಿಜೀಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಿಯಕರ ಹಾಗೂ ಕಾಲೇಜು ಆಡಳಿತ ಮಂಡಳಿಯವರ ವಿಚಾರಣೆ ನಡೆಸುತ್ತಿದ್ದಾರೆ.