ಬೆಂಗಳೂರು: ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ.
ಸಾಮಾನ್ಯ ಬಸ್ ಗಳಲ್ಲಿ ಗರಿಷ್ಠ ಪ್ರಯಾಣ ದರ ಗರಿಷ್ಟ 9 ರೂಪಾಯಿ ಹೆಚ್ಚಳವಾಗಲಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸುದ್ದಿಗೋಷ್ಠಿ ನಡೆಸಿ , ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಸಾಮಾನ್ಯ ಬಸ್ ಸೇವೆಗಳು:
ಹತ್ತಿರದ ಪ್ರಯಾಣ : 2 ಕಿ.ಮೀ. ವರೆಗಿನ ಪ್ರಯಾಣಕ್ಕೆ 4 ರೂ., 2 ಕಿ.ಮೀ. ನಿಂದ 4 ಕಿ.ಮೀ. ವರೆಗಿನ ಪ್ರಯಾಣಕ್ಕೆ 6 ರೂ. ರಷ್ಟು ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಸಾರಿಗೆ ಎಷ್ಟು ಏರಿಕೆ?
* ನೆಲಮಂಗಲ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ಹೊಸಕೋಟೆ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ದೊಡ್ಡಬಳ್ಳಾಪುರ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಆನೇಕಲ್ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಮಾಗಡಿ – 46 ರೂ. ನಿಂದ 57 ರೂ. (11 ರೂ. ಏರಿಕೆ)
* ಮಾಲೂರು – 46 ರೂ. ನಿಂದ 57 ರೂ. (11 ರೂ. ಏರಿಕೆ)
ವೇಗದೂತ ಸಾರಿಗೆ ಎಷ್ಟು ಏರಿಕೆ?
* ಕೋಲಾರ – 81 ರೂ. ನಿಂದ 100 ರೂ. (19 ರೂ. ಏರಿಕೆ)
* ತುಮಕೂರು – 81 ರೂ. ನಿಂದ 100 ರೂ. (19 ರೂ. ಏರಿಕೆ)
* ಮಂಡ್ಯ – 110 ರೂ. ನಿಂದ 136 ರೂ. (26 ರೂ. ಏರಿಕೆ)
* ಮೈಸೂರು – 160 ರೂ. ನಿಂದ 197 ರೂ. (37 ರೂ. ಏರಿಕೆ)
* ಹಾಸನ – 219 ರೂ. ನಿಂದ 270 ರೂ. (51 ರೂ. ಏರಿಕೆ)
* ಚಿಕ್ಕಮಗಳೂರು – 295 ರೂ. ನಿಂದ 363 ರೂ. (68 ರೂ. ಏರಿಕೆ)
ಸರ್ಕಾರದ ಸಮರ್ಥನೆ ಏನು?
ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಸಾಲದ ಹೊರೆಯೇ ದರ ಪರಿಷ್ಕರಣೆಗೆ ಪ್ರಮುಖ ಕಾರಣ ಎಂದು ವಿವರಿಸಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳು ಒಟ್ಟಾರೆಯಾಗಿ ಸುಮಾರು 10,200 ಕೋಟಿ ರೂ. ನಷ್ಟ ಹೊಂದಿದ್ದು, 9,912.10 ಕೋಟಿಯಷ್ಟು ಬಾಕಿ ಹಾಗೂ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿವೆ.
ಡೀಸೆಲ್ ಬೆಲೆ ನಿರಂತರ ಏರಿಕೆ:ಪ್ರಸ್ತುತ ಇಂಧನ ದರ ಸರಾಸರಿ ಪ್ರತಿ ಲೀಟರ್ಗೆ 98.13 ರೂ. ಆಗಿದೆ. ಕೇವಲ 2026ರ ಮೇ ತಿಂಗಳಿನಿಂದ ಅಕ್ಟೋಬರ್ ಅವಧಿಯಲ್ಲೇ ಡೀಸೆಲ್ ದರವು ಹಂತ-ಹಂತವಾಗಿ ಒಟ್ಟು 10.47 ರೂ. ರಷ್ಟು ಹೆಚ್ಚಳ ಕಂಡಿದೆ.
ಸಾರಿಗೆ ಸಂಸ್ಥೆಗಳ ಒಟ್ಟು ವೆಚ್ಚದಲ್ಲಿ ಶೇ. 80 ರಷ್ಟು ಹಣ ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚಕ್ಕೇ ವಿನಿಯೋಗವಾಗುತ್ತಿದೆ. ಪ್ರಸ್ತುತ ನಿಗಮಗಳು ಡೀಸೆಲ್ಗಾಗಿ ದಿನಕ್ಕೆ ಅಂದಾಜು 15.60 ಕೋಟಿ ರೂ. (ವರ್ಷಕ್ಕೆ ₹5,694 ಕೋಟಿ) ವ್ಯಯಿಸುತ್ತಿದ್ದು, ಈಗಾಗಲೇ 1,111.88 ಕೋಟಿ ರೂ. ಇಂಧನ ಬಾಕಿ ಪಾವತಿಸಬೇಕಿದೆ.
2016 ರಿಂದ 2026ರ ವರೆಗೆ ಸಿಬ್ಬಂದಿಯ ವೇತನ ಪರಿಷ್ಕರಣೆಗಳಿಂದಾಗಿ ನಿಗಮಗಳ ಮೇಲೆ ಬರೋಬ್ಬರಿ 6,418.04 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. 2016ರಲ್ಲಿ 1,131.11 ಕೋಟಿ ರೂ., 2023ರಲ್ಲಿ 1,792.38 ಕೋಟಿ ರೂ. ಹಾಗೂ 2026ರಲ್ಲಿ 3,494.55 ಕೋಟಿ ರೂ. ಏರಿಕೆಯಾಗಿದೆ.
ನಾಲ್ಕೂ ನಿಗಮಗಳಲ್ಲಿ ನೌಕರರ ಭವಿಷ್ಯ ನಿಧಿ (PF) ಮೊತ್ತ 2,916.80 ಕೋಟಿ ರೂ., ನಿವೃತ್ತ ನೌಕರರ ಬಾಕಿ 603.88 ಕೋಟಿ ರೂ., ವೇತನ ಪರಿಷ್ಕರಣೆ ಬಾಕಿ 664.17 ಕೋಟಿ ರೂ. ಹಾಗೂ ಇತರ ಸಿಬ್ಬಂದಿ ಪಾವತಿಗಳು 356.76 ಕೋಟಿ ರೂ. ಸೇರಿದಂತೆ ಬೃಹತ್ ಮೊತ್ತ ಪಾವತಿಗೆ ಬಾಕಿ ಉಳಿದಿದೆ.


