ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಸರ್ಕಾರ ಮತ್ತೊಂದು ದರ ಏರಿಕೆಯ ಶಾಕ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಪ್ರಯಾಣ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್(Byrathi Suresh) ಅಧಿಕೃತವಾಗಿ ಘೋಷಿಸಿದ್ದಾರೆ.
ಕೆಎಸ್ಆರ್ಟಿಸಿ(KSRTC) ಸಾಮಾನ್ಯ ಬಸ್ಸುಗಳಲ್ಲಿ ಮೊದಲ ಐದು ಹಂತಗಳ ಪ್ರಯಾಣದಲ್ಲಿ ಗರಿಷ್ಠ 9 ರೂ., ವೇಗದೂತ ಬಸ್ಸುಗಳಲ್ಲಿ ಹತ್ತು ಹಂತಗಳವರೆಗೆ ಗರಿಷ್ಠ 18 ರೂ.ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ಸ್ಟೇಜ್ಗೆ 4 ರೂ. ನಂತೆ ಹಂತ-ಹಂತವಾಗಿ ಏರಿಕೆಯಾಗಲಿದ್ದು, ದೂರದ ಪ್ರಯಾಣಕ್ಕೆ ಗರಿಷ್ಠ 12 ರೂ. ರಷ್ಟು ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಸಾರಿಗೆ ಬೆಂಗಳೂರಿನಿಂದ ಎಷ್ಟು ಏರಿಕೆ?
* ನೆಲಮಂಗಲ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ಹೊಸಕೋಟೆ – 35 ರೂ. ನಿಂದ 44 ರೂ. (9 ರೂ. ಏರಿಕೆ)
* ದೊಡ್ಡಬಳ್ಳಾಪುರ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಆನೇಕಲ್ – 38 ರೂ. ನಿಂದ 47 ರೂ. (9 ರೂ. ಏರಿಕೆ)
* ಮಾಗಡಿ – 46 ರೂ. ನಿಂದ 57 ರೂ. (11 ರೂ. ಏರಿಕೆ)
* ಮಾಲೂರು – 46 ರೂ. ನಿಂದ 57 ರೂ. (11 ರೂ. ಏರಿಕೆ)
ವೇಗದೂತ ಸಾರಿಗೆ – ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಎಷ್ಟು ಏರಿಕೆ?
* ಕೋಲಾರ – 81 ರೂ. ನಿಂದ 100 ರೂ. (19 ರೂ. ಏರಿಕೆ)
* ತುಮಕೂರು – 81 ರೂ. ನಿಂದ 100 ರೂ. (19 ರೂ. ಏರಿಕೆ)
* ಮಂಡ್ಯ – 110 ರೂ. ನಿಂದ 136 ರೂ. (26 ರೂ. ಏರಿಕೆ)
* ಮೈಸೂರು – 160 ರೂ. ನಿಂದ 197 ರೂ. (37 ರೂ. ಏರಿಕೆ)
* ಹಾಸನ – 219 ರೂ. ನಿಂದ 270 ರೂ. (51 ರೂ. ಏರಿಕೆ)
* ಚಿಕ್ಕಮಗಳೂರು – 295 ರೂ. ನಿಂದ 363 ರೂ. (68 ರೂ. ಏರಿಕೆ)
* ದಾವಣಗೆರೆ – 317 ರೂ. ನಿಂದ 390 ರೂ. (73 ರೂ. ಏರಿಕೆ)
* ಶಿವಮೊಗ್ಗ – 340 ರೂ. ನಿಂದ 419 ರೂ. (79 ರೂ. ಏರಿಕೆ)
* ಮಂಗಳೂರು – 423 ರೂ. ನಿಂದ 521 ರೂ. (98 ರೂ. ಏರಿಕೆ)
* ಹುಬ್ಬಳ್ಳಿ – 490 ರೂ. ನಿಂದ 613 ರೂ. (123 ರೂ. ಏರಿಕೆ)
* ಬೆಳಗಾವಿ – 603 ರೂ. ನಿಂದ 742 ರೂ. (139 ರೂ. ಏರಿಕೆ)
* ಕಲಬುರಗಿ – 754 ರೂ. ನಿಂದ 928 ರೂ. (174 ರೂ. ಏರಿಕೆ)


