– ಸರ್ಕಾರದ ಔದಾರ್ಯದಿಂದ ಅರಮನೆಯಲ್ಲಿ ವಾಸ ಇಲ್ಲ
– ಬೇಕಿದ್ರೆ ಇನ್ನೊಂದು ಅಂಬಾರಿ ಮಾಡಿಸಿಕೊಳ್ಳಲಿ
ಮೈಸೂರು: ಮೈಸೂರು ಅರಮನೆ ಖಾಸಗಿ ಸ್ವತ್ತು. ಅರಮನೆ ಕಟ್ಟಿಸಿದ್ದು ಸರ್ಕಾರ ಅಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸ ಇಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆಯ ಮಾಲೀಕತ್ವ ಹಾಗೂ ನಿರ್ವಹಣೆ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಅರಮನೆ ನಿರ್ವಹಣೆಗೆ ಅರಮನೆ ಆಡಳಿತ ಮಂಡಳಿ ರಚನೆ ಆಗಿದೆ. ಇದನ್ನು ನ್ಯಾಯಾಲಯದಲ್ಲಿ ನಾವು ಪ್ರಶ್ನಿಸಿದ್ದೇವೆ. ಇದು ಇನ್ನೂ ವಿಚಾರಣೆಯಲ್ಲಿದೆ. ನಾವು ಸರ್ಕಾರದ ವಿಶೇಷ ಅನುಗ್ರಹದಿಂದ ಇಲ್ಲಿ ವಾಸ ಇಲ್ಲ ಎಂದರು. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ – ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 68 ರೂ. ಹೆಚ್ಚಳ
ಅಂಬಾರಿಗೆ ಬಾಡಿಗೆ ಕೊಡುತ್ತಿಲ್ಲ. ಅಂಬಾರಿ ಇಟ್ಟುಕೊಂಡು ಟಿಕೆಟ್ ಮಾರಿ ಹಣ ಸಂಪಾದಿಸುತ್ತಾರೆ. ಅಂಬಾರಿ ಇಟ್ಟುಕೊಂಡು ಪ್ರಚಾರ ಮಾಡಿ ಹಣ ಮಾಡುತ್ತಾರೆ. ಇದಕ್ಕಾಗಿ ಹಣ ಕೊಡುತ್ತಾರೆ, ಅದು ಬಾಡಿಗೆ ಅಲ್ಲ. ಅಂಬಾರಿ, ಸಿಂಹಾಸನ ಎರಡು ನಮ್ಮ ವಶದಲ್ಲಿದೆ. ಹಿಂದೆಯೂ ನಮ್ಮ ವಶದಲ್ಲಿತ್ತು. ನಮ್ಮ ವಶದಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯುಪಿ ಜನತೆಗೆ ಯೋಗಿ ಸರ್ಕಾರದ ಬಂಪರ್ ಗಿಫ್ಟ್ – ಹೋಳಿ, ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ
ಅಂಬಾರಿಗೆ ಎಷ್ಟು ಗೌರವಧನ ನೀಡಲಾಗಿದೆ ಎಂಬುದನ್ನು ನಾನು ಬಹಿರಂಗಪಡಿಸುವುದಿಲ್ಲ. ಸರ್ಕಾರ ಬೇಕಾದರೆ ಎಷ್ಟು ಹಣ ನೀಡಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿ. ಅಂಬಾರಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಹಣ ಕೇಳಲಾಗುತ್ತಿದೆ. ಸರ್ಕಾರ ಬೇಕಾದರೆ ಇನ್ನೊಂದು ಅಂಬಾರಿಯನ್ನು ಮಾಡಿಸಿಕೊಳ್ಳಲಿ. ಇದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಈ ಹಿಂದೆಯೂ ಸರ್ಕಾರಕ್ಕೆ ಇದೇ ಸಲಹೆ ನೀಡಿದ್ದೆ. ಸರ್ಕಾರದ ಬಳಿ ಸಂಪನ್ಮೂಲವಿದೆ. ಹೊಸ ಅಂಬಾರಿ ಮಾಡಿಸಿಕೊಳ್ಳಬಹುದಿತ್ತು. ಆದರೆ, ಸರ್ಕಾರ ಮಾಡಿಸಲಿಲ್ಲ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಅಪ್ರಸ್ತುತ: ಸುಪ್ರೀಂ ಕೋರ್ಟ್
ಅಂಬಾರಿ ಹೊರುವ ಆನೆಯ ಬಗ್ಗೆ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ನನಗಿದೆ. ಅಂಬಾರಿಯ ಮಾಲೀಕರಾಗಿ ಅದನ್ನು ಹೊರುವ ಆನೆ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ನನ್ನ ಹಕ್ಕು. ಶಿಷ್ಟಾಚಾರದ ಪ್ರಕಾರ ನನಗೆ ತಿಳಿಸಬೇಕು ಎಂದು ನಾನು ಹೇಳಿಲ್ಲ. ಇದಕ್ಕೆ ಶಿಷ್ಟಾಚಾರ ಇಲ್ಲ ಎಂಬುದು ನನಗೂ ಗೊತ್ತು. ಅನೇಕ ವಿಚಾರಗಳು ಪರಸ್ಪರ ನಂಬಿಕೆ, ಸಹಕಾರ ಮತ್ತು ತಿಳುವಳಿಕೆಯಿಂದ ನಡೆಯುತ್ತವೆ. ಅಂಬಾರಿ ಹೊರುವ ಆನೆಯನ್ನು ಮೊದಲೇ ನಿರ್ಧರಿಸಬಹುದಿತ್ತು. ಕೇವಲ ಐದು ದಿನ ಮುಂಚಿತವಾಗಿ ತಿಳಿಸಿದರೆ ನಾನು ಹೇಗೆ ಭರವಸೆ ಮೂಡಿಸಿಕೊಳ್ಳಲಿ? ಯಾವ ಭರವಸೆಯ ಮೇಲೆ ಅಂಬಾರಿಯನ್ನು ನೀಡಲಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸೇತುವೆ ಮೇಲಿಂದ ಕೆಳಗೆ ಬಿದ್ದ ಈರುಳ್ಳಿ ತುಂಬಿದ ಲಾರಿ – ಚಾಲಕ, ಕ್ಲೀನರ್ ಸ್ಥಿತಿ ಚಿಂತಾಜನಕ
ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇನೆ ಎಂದು ಸಿಎಂ ಹೇಳಿರುವುದಕ್ಕೆ ಧನ್ಯವಾದಗಳು. ಇದನ್ನು ಜಾಸ್ತಿ ದೊಡ್ಡದು ಮಾಡುವುದು ಬೇಡ. ಪೊಲೀಸರ ಭದ್ರತಾ ವ್ಯವಸ್ಥೆ ಹೆಸರಿನಲ್ಲಿ ತೊಂದರೆ ಆಗಿತ್ತು. ಅದರ ಬಗ್ಗೆ ಧ್ವನಿ ಎತ್ತಿದ್ದೇನೆ. ಜಟ್ಟಿ ಕಾಳಗ ನಡೆಸುವವರನ್ನು ಒಳಗೆ ಬಿಟ್ಟಿಲ್ಲ. ಇದು ತೊಂದರೆ ಆಯಿತು. ಆಯುಧ ಪೂಜೆ ಮತ್ತು ವಿಜಯಯಾತ್ರೆಗೆ ಪ್ರತಿ ವರ್ಷವೂ ತೊಂದರೆ ಆಗುತ್ತಿದೆ. ನಾನು ಎಲ್ಲಿಯೂ ರಾಜ್ಯ ಸರ್ಕಾರವನ್ನು ದೂಷಿಸಿಲ್ಲ. ಏಳು ದಿನ ನವರಾತ್ರಿ ಮಾಡಿ ಎಂದು ಹೇಳಿಲ್ಲ. ಏಳು ದಿನಕ್ಕೆ ಅರ್ಧ ಮುಗಿಸಿ ನಂತರ ಮಾಡಿ ಎಂದು ಹೇಳಿದ್ದೇನೆ. ನಾನು ಸಲಹೆ ಮಾತ್ರ ಕೊಟ್ಟಿದ್ದೇನೆ. ನಾನು ಸರ್ಕಾರಕ್ಕೆ ನಿರ್ದೇಶನ ನೀಡಿಲ್ಲ. ನಾನು ಸರ್ಕಾರಕ್ಕೆ ಪತ್ರವೇ ಬರೆದಿಲ್ಲ. ಬರೀ ಮಾಧ್ಯಮಕ್ಕೆ ಪತ್ರ ಬರೆದು ಸಾರ್ವಜನಿಕರ ಸಹಕಾರ ಕೇಳಿದ್ದೇನೆ. ಈ ಸಮಸ್ಯೆ ಮತ್ತು ಗೊಂದಲವನ್ನು ಮುಂದಿನ ದಸರಾವರೆಗೂ ಮುಂದುವರಿಸುವುದಿಲ್ಲ. ದಸರಾ ಪ್ರಾಧಿಕಾರ ರಚನೆಯಿಂದಲೇ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಾನು ಹೇಳುವುದಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಮುಂದುವರಿಸುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ – ಒಂದಕ್ಕಿಂತ ಹೆಚ್ಚು ಮದುವೆಯಾದ್ರೆ ಸರ್ಕಾರಿ ನೌಕರರಿಗೆ ಕೆಲಸದಿಂದ ಗೇಟ್ಪಾಸ್
ಅಂಬಾರಿಯ ತೂಕ ಎಷ್ಟು, ಅದರಲ್ಲಿ ಎಷ್ಟು ಚಿನ್ನವಿದೆ ಎಂಬುದನ್ನು ನಾನು ತೂಕ ಹಾಕಿಲ್ಲ. ಮುಂದೆಯೂ ತೂಕ ಹಾಕುವುದಿಲ್ಲ. ಈ ಬಗ್ಗೆ ಯಾರಿಗೆ ಏನು ಅನಿಸುತ್ತದೆಯೋ ಅದನ್ನು ಬರೆದುಕೊಳ್ಳಲಿ, ಮಾತನಾಡಲಿ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ ವರುಣನ ಅಬ್ಬರ; ಮಡಿಕೇರಿ ಸುತ್ತಮುತ್ತ ಎಡೆಬಿಡದೆ ಸುರಿಯುತ್ತಿರುವ ಮಳೆ
