– ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ
ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾಗೆ (Ayushmann Khurrana) ಬಿಷ್ಣೋಯ್ ಗ್ಯಾಂಗ್ (Bishnoi Gang) ಜೊತೆ ನಂಟಿದೆ ಎನ್ನಲಾದ ವ್ಯಕ್ತಿಯೋರ್ವ ಬೆದರಿಕೆ ಹಾಕಿದ್ದು, ಕೋಟ್ಯಂತರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.
ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯೋರ್ವನಿಂದ ಆಡಿಯೋ ಸಂದೇಶ ಬಂದಿದೆ. ಆ ಆಡಿಯೋದಲ್ಲಿ ಕೋಟ್ಯಂತರ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ʻರಾಮಾಯಣ ಭಾಗ-3ʼ ಬಗ್ಗೆ ಹಿಂಟ್ ಕೊಟ್ಟ ರಣಬೀರ್ ಕಪೂರ್
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಡಿಯೋ ಕ್ಲಿಪ್ ಬಂದಿರುವುದನ್ನು ಖಚಿತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ಎಫ್ಐಆರ್ ದಾಖಲಾಗಿಲ್ಲ. ಸದ್ಯ ನಟನಿಗೆ ಬಂದಿರುವ ಆಡಿಯೋ ಕ್ಲಿಪ್ನಲ್ಲಿ ಹೇಳಿಕೊಂಡಿರುವ ಆರೋಪಿ ಹೆಸರು ಹಾಗೂ ಪೊಲೀಸರು ತಮ್ಮ ದಾಖಲೆಗಳಲ್ಲಿರುವ ಹೆಸರುಗಳೊಂದಿಗೆ ಹೋಲಿಕೆ ಮಾಡಲಿದ್ದಾರೆ.
ಕೆಲವು ದಿನಗಳ ಹಿಂದೆ ನಟ ತುಷಾರ್ ಕಪೂರ್ ಅವರಿಗೂ ಕೂಡ ಇಂತಹದ್ದೇ ಆಡಿಯೋ ಸಂದೇಶವ ಬಂದಿತ್ತು. ಕಳುಹಿಸಿದ ವ್ಯಕ್ತಿಯು ತಾನು ಹ್ಯಾರಿ ಬಕ್ಸರ್ ಎಂದು ಹೇಳಿಕೊಂಡಿದ್ದ. ಆದರೆ ಪ್ರಾಥಮಿಕ ತನಿಖೆಯು ಈ ಆಡಿಯೋ ಕ್ಲಿಪ್ ನಕಲಿ ಆಗಿರಬಹುದು ಎಂದು ಸೂಚಿಸಿತ್ತು.ಇದನ್ನೂ ಓದಿ: ದೀಪಾವಳಿ ಜಾಗೃತಿ ಬಗ್ಗೆ ದಿಯಾ ಮಿರ್ಜಾ ವೀಡಿಯೊ ಡಿಲೀಟ್ – ಹೈಕೋರ್ಟ್ ವಾರ್ನಿಂಗ್ ಬಳಿಕ ಮತ್ತೆ ಅಪ್ಲೋಡ್
