ಚಿಕ್ಕಬಳ್ಳಾಪುರ: ಅಂಗನವಾಡಿಗಳು ಅಂದ್ರೆ ಸಾಕು ಸೋರೋ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಪಾಳು ಬೀಳೋ ಹಂತಕ್ಕೆ ತಲುಪಿರೋ ಕಟ್ಟಡಗಳೇ ಜಾಸ್ತಿ. ಇಂತಹ ಅಂಗನವಾಡಿಗಳ ಮಧ್ಯೆ ರಾಜ್ಯದಲ್ಲೇ ಮಾದರಿ ಎಂಬಂತೆ ಅಂಗನವಾಡಿಯೊಂದು ತಲೆ ಎತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಗುಹೆಯ ಮಾದರಿಯಲ್ಲಿ ನಿರ್ಮಾಣ ಆಗಿರೋ ಮಾಡೆಲ್ ಅಂಗನವಾಡಿ ಫಸ್ಟ್ ಲುಕ್ ಅಲ್ಲೇ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಸಿಎಂ ನೋಡಲು ಡಿಸೇಂಟ್ ಆದರೆ, ನಿರ್ಣಯಗಳು ತುಂಬಾ ಸ್ಟ್ರಾಂಗ್: ಸುಧಾಕರ್
Advertisement
Advertisement
ಅಂದಹಾಗೆ ಗ್ರಾಮದಲ್ಲಿದ್ದ ಹಳೆಯ ಅಂಗನವಾಡಿ ಸೋರೋಕೆ ಶುರುವಾಗಿ ಈಗಲೋ, ಆಗಲೋ ಕುಸಿದು ಬೀಳುವ ಹಂತಕ್ಕೆ ಬಂದು ನಿಂತಿತ್ತು. ಇದ್ರಿಂದ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಈಗ ನೂತನ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆಗಳನ್ನ ನಡೆಸಿದ್ದಾರೆ.
Advertisement
Advertisement
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿನ ಏಜಾಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸಿಎಸ್‍ಆರ್ ಅನುದಾನದಡಿಯಲ್ಲಿ ಈ ಹೊಚ್ಚ ಹೊಸ ಹೈಟೆಕ್ ಮಾದರಿಯ ಅಂಗನವಾಡಿಯನ್ನ ನಿರ್ಮಿಸಲಾಗಿದೆ. 22 ಲಕ್ಷ ರೂ. ವೆಚ್ಚದಲ್ಲಿ ಮೂರು ಕೊಠಡಿಗಳುಳ್ಳ ಗುಹೆಗಳ ಮಾದರಿಯ ಕಟ್ಟಡ ಇದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅನಿತಾ ತಿಳಿಸಿದ್ದಾರೆ.
ಕಟ್ಟಡದ ವಿನ್ಯಾಸವೇ ವಿಚಿತ್ರವಾಗಿದ್ದು, ವಿಭಿನ್ನ ಎಂಬಂತಿದೆ. ಮೂರು ಗುಹೆಗಳ ಮಾದರಿಯ ಕೊಠಡಿಗಳಲ್ಲಿ ಒಂದು ಪಾಠ ಪ್ರವಚನಕ್ಕೆ, ಮತ್ತೊಂದು ಅಡುಗೆ ಕೋಣೆ, ಮಗದೊಂದರಲ್ಲಿ ಶೌಚಾಲಯ ಹಾಗೂ ವಿಶ್ರಾಂತಿಧಾಮವಿದೆ. ಥೇಟ್ ವಿಲ್ಲಾಗಳಂತೆ ಹೈಟೆಕ್ ಆಗಿರೋ ಈ ಆಂಗನವಾಡಿ ಪುಟಾಣಿ ಮಕ್ಕಳನ್ನ ಆಕರ್ಷಿಸೋದೆ ಅಷ್ಟೇ ಅಲ್ಲದೆ ನೋಡುಗರ ಗಮನವನ್ನ ಸೆಳೆಯುತ್ತಿದೆ. ಇಂತಹ ಮಾಡೆಲ್ ಅಂಗನವಾಡಿಗಳಿಗೆ ಮತ್ತಷ್ಟು ಬೇಡಿಕೆ ಬರ್ತಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್
ಅಂಗನವಾಡಿ ಕಟ್ಟಡ ನಿರ್ಮಾಣ ಅಂತಿಮವಾಗಿ ಉದ್ಗಾಟನೆಗೆ ದಿನಗಣನೆ ಶುರುವಾಗಿದ್ದು ಅಧಿಕಾರಿಗಳು ಅಂತಿಮ ಹಂತದ ಸಿದ್ದತೆಗಳನ್ನ ಮಾಡಿಕೊಳ್ತಿದ್ದಾರೆ.