ಕಿರುತೆರೆಯ ‘ಕಮಲಿ’ ಸೀರಿಯಲ್ ಮೂಲಕ ಮನೆಮಾತಾದ ನಟಿ ಅಮೂಲ್ಯ ಗೌಡ (Amulya Gowda), ಬಿಗ್‌ಬಾಸ್ ಸೀಸನ್ 9ಕ್ಕೆ (Bigg Boss) ಎಂಟ್ರಿ ಕೊಟ್ಟಿದ್ದರು. ಈ ಶೋ ಮುಖಾಂತರ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈಗ ಅಮೂಲ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
ಟಿವಿ ಪರದೆಯಲ್ಲಿ ರಿಷಿ ಮನದರಸಿ ಕಮಲಿಯಾಗಿ ಮನಗೆದ್ದ ನಟಿ ಅಮೂಲ್ಯ ಅಭಿನಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಬಳಿಕ ದೊಡ್ಮನೆಗೆ ಕಾಲಿಟ್ಟ ಅಮೂಲ್ಯ, ಅಡುಗೆ, ಟಾಸ್ಕ್, ಮನರಂಜನೆ ಹೀಗೆ ಪ್ರತಿಯೊಂದರಲ್ಲೂ ಗಟ್ಟಿ ಸ್ಪರ್ಧಿಯಾಗಿ ಹೈಲೈಟ್ ಆಗಿದ್ದರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿಯೂ ಸದ್ದು ಮಾಡಿದ್ದರು. ಈಗ 14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ದಿವ್ಯಾಗೆ ಕ್ಲಾಸ್ ತಗೆದುಕೊಂಡು ಆರ್ಯವರ್ಧನ್ ಗುರೂಜಿ
Advertisement
Advertisement
ಫಿನಾಲೆಗೆ ಕಡೆಯ ಘಟ್ಟದಲ್ಲಿ ಇರುವ ಈ ವಾರಾಂತ್ಯ ಇಬ್ಬರು ಸ್ಪರ್ಧಿಗಳು ಹೊರಬರಲಿದ್ದಾರೆ. ಅದರಲ್ಲಿ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಗೌಡ ಔಟ್ ಆಗಿದ್ದಾರೆ.
Advertisement
Advertisement
ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಇದನ್ನೂ ಓದಿ: ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್