ಕುಡ್ಲದ ಸುಂದರಿ ಕೃತಿ ಶೆಟ್ಟಿ (Krithi Shetty) ತೆಲುಗು, ತಮಿಳು, ಮಲಯಾಳಂ ಬಳಿಕ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಸ್ಟಾರ್ ನಟ ವರುಣ್ ಧವನ್‌ಗೆ ಕೃತಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
‘ಉಪ್ಪೇನ’ (Uppena) ಸಿನಿಮಾ ಮೂಲಕ ಸಕ್ಸಸ್ ಕಂಡಿದ್ದ ನಟಿ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ವರುಣ್ ಧವನ್ (Varun Dhawan) ಹೊಸ ಚಿತ್ರದಲ್ಲಿ ಕೃತಿ ನಾಯಕಿ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಮುಂಬೈನಲ್ಲಿ ನಟಿ ಕಾಣಿಸಿಕೊಂಡಿರೋದು ವರುಣ್ ಜೊತೆಗಿನ ಸಿನಿಮಾ ಸುದ್ದಿಗೆ ಪುಷ್ಠಿ ನೀಡಿದಂತೆ ಆಗಿದೆ.
Advertisement
Advertisement
ಶ್ರೀಲೀಲಾ ಬದಲು ಕೃತಿಗೆ ಚಿತ್ರತಂಡ ಮಣೆ ಹಾಕಿದೆ ಎನ್ನಲಾಗಿದೆ. ಡೇವಿಡ್ ಧವನ್ ನಿರ್ದೇಶನದ ಸಿನಿಮಾಗೆ ಕೃತಿ ನಾಯಕಿನಾ? ಎಂಬ ಸುದ್ದಿ ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕಿತ್ತೆಸೆಯಬೇಕು- ಕಾಸ್ಟಿಂಗ್ ಕೌಚ್ ಬಗ್ಗೆ ಚೇತನ್ ಗರಂ
Advertisement
ಇನ್ನೂ ‘ಉಪ್ಪೇನ’ ಬೆಡಗಿಗೆ ಹಿಂದಿ ಸಿನಿಮಾ ಹೊಸದಲ್ಲ. ಈ ಹಿಂದೆ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದರು. ಆದಾದ ನಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ‘ಉಪ್ಪೇನ’ ಚಿತ್ರದಲ್ಲಿ ಕೃತಿ ಲಾಂಚ್ ಆದರು.