LatestLeading NewsMain PostNational

ಓಂ ಜೈ ಜಗದೀಶ್‌ ಹರೇ ಭಕ್ತಿಗೀತೆ ಹಾಡಿದ 75ನೇ ಸ್ವಾತಂತ್ರ್ಯೋತ್ಸವದ ಅತಿಥಿ ಅಮೆರಿಕ ಗಾಯಕಿ – ವೀಡಿಯೋ ವೈರಲ್‌

ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಆಫ್ರಿಕಾ ಮೂಲದ ಅಮೆರಿಕ ಗಾಯಕಿ ಮೇರಿ ಮಿಲಬೆನ್‌ ಅವರು, ಭಕ್ತಿ ಗೀತೆ ʼಓಂ ಜೈ ಜಗದೀಶ್ ಹರೇ‌ʼ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.

ಮೇರಿ ಮಿಲಬೆನ್‌ ಅವರು ಭಾರತದ ರಾಷ್ಟ್ರಗೀತೆ ʼಜನ ಗಣ ಮನʼ ಹಾಗೂ ಭಕ್ತಿ ಗೀತೆ ʼಓಂ ಜೈ ಜಗದೀಶ್‌ ಹರೇʼ ಗೀತೆಗಳನ್ನು ಸೊಗಸಾಗಿ ಹಾಡುತ್ತಾರೆ. ಈ ಗೀತೆಗಳ ಮೂಲಕವೇ ಅವರು ಭಾರತಕ್ಕೆ ಹೆಚ್ಚು ಚಿರಪರಿಚಿತರಾಗಿದ್ದಾರೆ. ಅವರನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಿ ಕೌನ್ಸಿಲ್‌ (ಐಸಿಸಿಆರ್‌) ಅತಿಥಿಯಾಗಿ ಆಹ್ವಾನಿಸಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಇನ್ನು ಭಾರತದ ಧ್ವಜ ಮಾತ್ರ ಹಾರುತ್ತದೆ, ಪಾಕ್ ಧ್ವಜ ಇತಿಹಾಸ ಮಾತ್ರ: ಮನೋಜ್ ಸಿನ್ಹಾ

ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸುತ್ತಿರುವುದಕ್ಕೆ ಮಿಲಬೆನ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರನ್ನು ಸಹ ಹಾಡಿ ಹೊಗಳಿದ್ದಾರೆ. ʼಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣದಲ್ಲಿ ದೂರದೃಷ್ಟಿಯುಳ್ಳ ನಾಯಕರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾರತದ ರಾಷ್ಟ್ರಪತಿಯಾಗುವ ಅವಕಾಶವನ್ನು ಕಲ್ಪಿಸಿದ್ದಾರೆ. ಅದಕ್ಕಾಗಿ ಅವರನ್ನು ಗೌರವಿಸುತ್ತೇನೆʼ ಎಂದು ಹೇಳಿದ್ದಾರೆ.

ಬುಡಕಟ್ಟು ಸಮುದಾಯದಿಂದ ಬಂದಿರುವ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿದ್ದಾರೆ. ಅವರು ಭಾರತದ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಪ್ರಪಂಚದಾದ್ಯಂತ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್‌ಘರ್ ತಿರಂಗ ಅಭಿಯಾನ – ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿ ಸಂತಸಗೊಂಡ ಮೋದಿ ತಾಯಿ

Live Tv

Leave a Reply

Your email address will not be published.

Back to top button