Connect with us

ರಾಹುಲ್ ಪ್ರಧಾನಿ ಆಗೋವರೆಗೆ ಚಪ್ಪಲಿಯೇ ಹಾಕಲ್ಲ – ಅಭಿಮಾನಿಯಿಂದ ಶಪಥ

ರಾಹುಲ್ ಪ್ರಧಾನಿ ಆಗೋವರೆಗೆ ಚಪ್ಪಲಿಯೇ ಹಾಕಲ್ಲ – ಅಭಿಮಾನಿಯಿಂದ ಶಪಥ

ಕೊಪ್ಪಳ: ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಹುಡುಕಿಕೊಂಡು ಹರಿಯಾಣದಿಂದ ಅಭಿಮಾನಿಯೊಬ್ಬರು ಬಂದಿದ್ದಾರೆ. ಇವರು ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ್ದಾರೆ.

ಅಭಿಮಾನಿಯ ಹೆಸರು ದಿನೇಶ್ ಶರ್ಮಾ. ಹರಿಯಾಣದ ಕಾಕ್ರೋಡ್ ಗ್ರಾಮದವರು. ಇವರು ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೆ ನಾನು ಚಪ್ಪಲಿಯನ್ನೇ ಹಾಕಲ್ಲ ಎಂದು ಶಪಥ ಮಾಡಿದ್ದಾರೆ. ದಿನೇಶ್ ಕಳೆದ ಏಳು ವರ್ಷದಿಂದ ಚಪ್ಪಲಿ ಇಲ್ಲದೆ ನಡೆಯುತ್ತಿದ್ದಾರೆ.

ಅಷ್ಟೇ ಅಲ್ಲದೇ ಈ ಅಭಿಮಾನಿ ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಾರೆ. ಶನಿವಾರ ಬಳ್ಳಾರಿಗೂ ಹೋಗಿದ್ದರು. ಆದರೆ ಪೊಲೀಸರು ಅಭಿಮಾನಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ರಾಹುಲ್ ಅಭಿಮಾನಿ ಎಂದು ತಿಳಿದ ಮೇಲೆ ಬಿಟ್ಟಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ಪಿಎಂ ಆಗೋವರೆಗೂ ನಾನು ಮದ್ವೆಯಾಗಲ್ಲ ಎಂದ ಯುವಕ

 

Advertisement
Advertisement