ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿಸಿಎಂ ಹುದ್ದೆಗಾಗಿ ಒಂದೇ ಸಮುದಾಯದ ಪ್ರಬಲ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಸ್ಲಿಂ ನಾಯಕರು ಹಾಗೂ ದಲಿತ ನಾಯಕರ (Dalit Leader) ನಡುವೆ ಪೈಪೋಟಿ ನಡೆಯುತ್ತಿದೆ ಅನ್ನೋ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಒಂದ್ಕಡೆ ಮುಸ್ಲಿಂ ಸಮುದಾಯದಲ್ಲಿ (Muslim Community) ಸಚಿವ ಜಮೀರ್ ಅಹ್ಮದ್ ಪರ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ. ಇತ್ತ ಡಿಕೆಶಿ ಬಣದಿಂದ ಮೊಹಮ್ಮದ್ ಹ್ಯಾರಿಸ್ ಹಾಗೂ ಯು.ಟಿ ಖಾದರ್ ಹೆಸರು ಮುನ್ನೆಲೆಗೆ ಬಂದಿದೆ.

ಇನ್ನೂ ದಲಿತ ಸಮುದಾಯದಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ಜಿ. ಪರಮೇಶ್ವರ್ ಅವರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಆದರೆ ಇಬ್ಬರು ಬಲಗೈ ಸಮುದಾಯದವರು ಈ ಹಿಂದೆಯೂ ಡಿಸಿಎಂ ಹುದ್ದೆ ಆ ವರ್ಗಕ್ಕೆ ಸಿಕ್ಕಿದೆ. ಈ ಬಾರಿ ಎಡಗೈ ಸಮುದಾಯಕ್ಕೆ ಕೊಡಿ ಎಂದು ಮುನಿಯಪ್ಪ ಪಟ್ಟು ಹಿಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ರೇಸ್‌ನಿಂದ ಲಿಂಗಾಯತ ಸಮುದಾಯ ಔಟ್ ಆದ್ರೆ, ಡಿಸಿಎಂ ಹುದ್ದೆ ಫಿಕ್ಸ್ ಆಗಬಹುದು ಎಂದು ಹೇಳಲಾಗಿದೆ. ಆದ್ರೆ ಡಿಸಿಎಂ ಹುದ್ದೆಗೂ ಎಂ.ಬಿ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ನಡುವೆ ಫೈಟ್ ಜೋರಾಗಿದೆ.
ಈ ಬೆಳವಣಿಗೆ ನಡುವೆ ಸಚಿವ ಸ್ಥಾನಕ್ಕೆ ಲಾಭಿ ಜೋರಾಗಿದ್ದು, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಅವರು ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಶಾಸಕರಾದ ಬಂಗಾರಪೇಟೆ ನಾರಾಯಣ ಸ್ವಾಮಿ, ಗಣೇಶ್ ಹುಕ್ಕೇರಿ ಡಿಕೆಶಿ ಭೇಟಿಗೆ ಆಗಮಿಸಿದ್ದಾರೆ.
