ದುಬಾರಿ ಡ್ರೆಸ್ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಆಲಿಯಾ ಭಟ್

Advertisements

ಬಾಲಿವುಡ್ ನಟಿ ಆಲಿಯಾ ಭಟ್ ತಾಯತ್ತನದ ಖುಷಿಯಲ್ಲಿದ್ದಾರೆ. ಸಿನಿಮಾ ಕೆರಿಯರ್ ಮತ್ತು ವೈಯಕ್ತಿಕ ಜೀವನ ಎರಡನ್ನು ನಿಭಾಯಿಸಿಕೊಂಡ ಹೋಗುತ್ತಿದ್ದಾರೆ. ಇದೀಗ ತಮ್ಮ ದುಬಾರಿ ಡ್ರೆಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

Advertisements

`ಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಆಲಿಯಾ ಮತ್ತು ರಣ್‌ಬೀರ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಆಲಿಯಾ ಪಿಂಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದರು. ನಟಿಯ ಬೇಬಿ ಬಂಪ್ ಲುಕ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Advertisements

ಇತ್ತೀಚೆಗೆ ನಡೆದ ʻಬ್ರಹ್ಮಾಸ್ತ್ರʼ ಚಿತ್ರದ ಪ್ರಚಾರದ ಈವೆಂಟ್‌ನಲ್ಲಿ ಆಲಿಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಆಲಿಯಾ ಧರಿಸಿದ ಡ್ರೆಸ್ ಬೆಲೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆಲಿಯಾ ಧರಿಸಿರುವ ಪಿಂಕ್ ಡ್ರೆಸ್‌ನ ಬೆಲೆ 4100 ಡಾಲರ್, ನಮ್ಮ ಕರೆನ್ಸಿಯಲ್ಲಿ ರೂ 3,87,883 ಆದರೆ ಈ ಸಿಂಪಲ್ ಡ್ರೆಸ್‌ಗೆ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

ಒಟ್ನಲ್ಲಿ ಸಿನಿಮಾ ಪ್ರಚಾರಕ್ಕಿಂತ ಆಲಿಯಾ ಧರಿಸಿದ್ದ ಡ್ರೆಸ್ ಬೆಲೆಯೇ ಚರ್ಚೆಗೆ ಗ್ರಾಸವಾಗಿದೆ.

Advertisements

Live Tv

Advertisements
Exit mobile version